ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ವಿಮಾನ ಪ್ರಯಾಣಿಕರಿಗೆ ಗುಡ್ನ್ಯೂಸ್ ಇದಾಗಿದ್ದು, ಇನ್ಮುಂದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಅಂಗವೈಕಲ್ಯ ಹೊಂದಿರುವವರಿಗೆ ವಿಶೇಷ ಸೇವೆಗಳನ್ನುಒದಗಿಸಲಿದೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ
ರಾತ್ರಿ 1 ರಿಂದ 4ರ ನಡುವೆ ನಿದ್ರೆ ಬರಲ್ವಾ.? ನಿರ್ಲಕ್ಷಿಸ್ಬೇಡಿ, ಇದು ‘ಗಂಭೀರ ಕಾಯಿಲೆ’ ಲಕ್ಷಣ ಆಗಿರ್ಬೋದು ; ಅಧ್ಯಯನ
ಈ ಸೇವೆಗಳು ವಿಶೇಷವಾಗಿ ಗಾಲಿಕುರ್ಚಿ ಬಳಸುವ ಅಂಗವಿಕಲ ವ್ಯಕ್ತಿಗಳಿಗೆ ಇಲ್ಲವೇ ಕಡಿಮೆ ಚಲನಶೀಲತೆ ಮತ್ತು ದೃಷ್ಟಿಹೀನ ವ್ಯಕ್ತಿಗಳಿಗೆ ಆಗಿದೆ. ನಿರ್ಗಮನದಲ್ಲಿ ಪ್ರವೇಶ ದ್ವಾರ 5 ಗಾಲಿಕುರ್ಚಿ ಬಳಕೆದಾರರಿಗೆ ಮತ್ತು ಕಡಿಮೆ ಚಲನಶೀಲತೆ ಹೊಂದಿರುವ ವ್ಯಕ್ತಿಗಳಿಗೆ ತೆರೆದಿರುತ್ತದೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಲಾಗಿದೆ
ಅಂತಹ ಪ್ರಯಾಣಿಕರು ಈಗ ನಿರ್ಗಮನದಲ್ಲಿ ಲೇನ್ 1ರಲ್ಲಿ ಗೊತ್ತುಪಡಿಸಿದ ಡ್ರಾಪ್ ಆಫ್ ಜಾಗವನ್ನು ಬಳಸಿಕೊಳ್ಳಬಹುದು. ಅವರು ಆದ್ಯತೆಯ ಚೆಕ್ ಇನ್ ಮತ್ತು ಗೊತ್ತುಪಡಿಸಿದ ಭದ್ರತಾ ಚೆಕ್ ಲೇನ್ನಲ್ಲಿ ಸ್ಥಳವನ್ನು ತಲುಪಬಹುದು.
ರಾತ್ರಿ 1 ರಿಂದ 4ರ ನಡುವೆ ನಿದ್ರೆ ಬರಲ್ವಾ.? ನಿರ್ಲಕ್ಷಿಸ್ಬೇಡಿ, ಇದು ‘ಗಂಭೀರ ಕಾಯಿಲೆ’ ಲಕ್ಷಣ ಆಗಿರ್ಬೋದು ; ಅಧ್ಯಯನ
ದೃಷ್ಟಿಹೀನ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ವಿಮಾನ ನಿಲ್ದಾಣವು ಎಲ್ಲಾ ಆಹಾರ ಸಂಸ್ಥೆಗಳಲ್ಲಿ ಬ್ರೈಲ್ ಮೆನುಗಳನ್ನು ಪರಿಚಯಿಸಿದ್ದು, ಇದರಿಂದ ಅಂಗವೈಕಲ್ಯ ಹೊಂದಿರುವವರಿಗೆ ಇದು ಅತ್ಯಗತ್ಯವಾಗಿದ್ದು, ಈ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ಸೇವೆಗಳನ್ನು ಒದಗಿಸಿದ್ದು ಮೆಚ್ಚುಗೆಗೆ ಪಾತ್ರವಾಗಿದಂತೂ ನಿಜ ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಬಳಕೆಯಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ
ರಾತ್ರಿ 1 ರಿಂದ 4ರ ನಡುವೆ ನಿದ್ರೆ ಬರಲ್ವಾ.? ನಿರ್ಲಕ್ಷಿಸ್ಬೇಡಿ, ಇದು ‘ಗಂಭೀರ ಕಾಯಿಲೆ’ ಲಕ್ಷಣ ಆಗಿರ್ಬೋದು ; ಅಧ್ಯಯನ