ಬಳ್ಳಾರಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ 2022-23ನೇ ಸಾಲಿನಲ್ಲಿ ಭತ್ತ, ರಾಗಿ, ಜೋಳ ಬೆಳೆಗಳನ್ನು ರೈತರಿಂದ ನೇರವಾಗಿ ಖರೀದಿಸಲು ಡಿ.15ರಿಂದ ರೈತರ ನೊಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಪವನ್ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
Job Alert : ಸಿಬ್ಬಂದಿ ನೇಮಕಾತಿ ಆಯೋಗದ ಹುದ್ದೆಗಳ ನೇಮಕಾತಿ : ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಆಹ್ವಾನ
ರೈತರ ನೊಂದಣಿ ಪ್ರಕ್ರಿಯೆ ಡಿ.15ರಿಂದ 30ರವರೆಗೆ ನಡೆಯಲಿದೆ ಹಾಗೂ ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆಯು 2023ನೇ ಜನವರಿ 1ರಿಂದ 2023ನೇ ಮಾರ್ಚ್ 31ರವರೆಗೆ ನಡೆಯಲಿದೆ. ಕೃಷಿ ಉತ್ಪನ್ನಗಳಾದ ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್ಗೆ ರೂ.2040, ಗ್ರೇಡ್ ಎ-ಭತ್ತಕ್ಕೆ ರೂ.2060, ರಾಗಿಗೆ ರೂ.3578, ಹೈಬ್ರೀಡ್-ಬಿಳಿ ಜೋಳಕ್ಕೆ ರೂ.2970, ಮಾಲ್ದಂಡಿ-ಬಿಳಿ ಜೋಳಕ್ಕೆ ರೂ.2990 ಬೆಂಬಲ ಬೆಲೆಗಳಾಗಿವೆ.
ಬೆಂಬಲ ಬೆಲೆ ಯೋಜನೆಯಡಿ ಭತ್ತÀವನ್ನು ಮಾರಾಟ ಮಾಡಲು ರೈತರು ಮೊದಲು ಕೃಷಿ ಇಲಾಖೆಯಲ್ಲಿ ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿ ಮಾಡಿಕೊಳ್ಳಬೇಕು. ಆಯಾ ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ, ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಾಲೂಕು ಕೇಂದ್ರ ಕಚೇರಿಗಳಲ್ಲಿ ತೆರೆಯಲಾಗುವ ಖರೀದಿ ಕೇಂದ್ರಗಳಲ್ಲಿ ಭತ್ತ, ರಾಗಿ, ಜೋಳ ಮಾರಾಟ ಮಾಡಲು ನೊಂದಾಯಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
*ನೊಂದಣಿ ಮತ್ತು ಖರೀದಿ ಕೇಂದ್ರಗಳ ವಿವರ: ಬಳ್ಳಾರಿಯ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ, ಕುರುಗೋಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸಿರುಗುಪ್ಪ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ, ಸಂಡೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕಂಪ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ನೊಂದಣಿ ಮತ್ತು ಖರೀದಿ ಕೇಂದ್ರಗಳಾಗಿವೆ.
*ಖರೀದಿ ಅಧಿಕಾರಿಗಳು ಮತ್ತು ಗ್ರೇಡರ್ಗಳು: ಬಳ್ಳಾರಿಯ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಸಹಾಯಕ ಕಾರ್ಯದರ್ಶಿ ನಾಗರಾಜ ಅವರ ಮೊ.9611334455 ಹಾಗೂ ಮೋಕಾ ಸಹಾಯಕ ಕೃಷಿ ಅಧಿಕಾರಿ ಖಾಜ ಮೊಹಿನುದ್ದೀನ್ ಅವರ ಮೊ.8277934299, ಕುರುಗೋಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಹುಸೇನ್ ಸಾಬ್ ಅವರ ಮೊ.8951307333, ಕೃಷಿ ಅಧಿಕಾರಿ ದೇವರಾಜ.ಎಂ ಅವರ ಮೊ.8277934300, ಸಿರುಗುಪ್ಪ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷ ಶಾಂತನಗೌಡ ಅವರ ಮೊ.9108800969 ಹಾಗೂ ಹಚ್ಚೋಳ್ಳಿಯ ಕೃಷಿ ಅಧಿಕಾರಿ ಬಾಲಾಜಿ ನಾಯಕ್.ಎಂ ಅವರ ಮೊ.8277928176, ಸಂಡೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಶಿವಲಿಂಗಪ್ಪ ಅವರ ಮೊ.9980676497, ಕೃಷಿ ಅಧಿಕಾರಿ ರಾಘವೇಂದ್ರ ಅವರ ಮೊ.8277930434, ಕಂಪ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಆಂಜಿನೇಯಲು ಮೊ.9448717434, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಮಡಿವಾಳರ ಎ.ಎಸ್.ಅವರ ಮೊ.9481080998 ಅವರನ್ನು ಸಂಪರ್ಕಿಬಹುದಾಗಿದೆ.
ಸೂಚನೆಗಳು: ಎಲ್ಲಾ ಹೋಬಳಿ ಮಟ್ಟದ ಖರೀದಿ ಕೇಂದ್ರಗಳಲ್ಲಿ ಆನ್ಲೈನ್ ಮುಖಾಂತರ ರೈತರ ನೊಂದಣಿಯನ್ನು ಮಾಡಲಾಗುವುದು. ಖರೀದಿ ಕೇಂದ್ರಕ್ಕೆ ರೈತರು ಕೃಷಿ ಇಲಾಖೆಯಿಂದ ಪಡೆದಿರುವ ಅವರ ಫ್ರೂಟ್ಸ್ ಐ.ಡಿ. (ರೈತರ ನೊಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (Farmer Registration and Unified Beneficiary Information System- FRUITS) ಮತ್ತು ಆಧಾರ್ನೊಂದಿಗೆ ನೊಂದಣಿ ಕೇಂದ್ರಕ್ಕೆ ಬರಬೇಕು. ಬೆಂಬಲ ಬೆಲೆಗಾಗಿ ರೈತರನ್ನು ಪ್ರತ್ಯೇಕವಾಗಿ ನೊಂದಾಯಿಸದೇ ಕೇವಲ ಅವರ ಫ್ರೂಟ್ಸ್ ಐ.ಡಿ.ಯ ಮೂಲಕ ಖರೀದಿಗೆ ನೊಂದಾಯಿಸಲಾಗುವುದು. ರೈತರ ಫ್ರೂಟ್ಸ್ ಐ.ಡಿ ಯನ್ನು (ಉದಾ: ಎಫ್.ಐಡಿ 2205000013125) ಈ ಸಾಲಿನಲ್ಲಿ ರೈತರಿಂದ ಫ್ರೂಟ್ಸ್ ಐ.ಡಿ ಪಡೆಯುವುದು ಕಡ್ಡಾಯ. ರೈತರ ಬಳಿ ಫ್ರೂಟ್ಸ್ ಐ.ಡಿ ಇಲ್ಲದಿದ್ದಲ್ಲಿ ಅಥವಾ ಅವರ ಫ್ರೂಟ್ಸ್ ಐ.ಡಿ ಮಾಹಿತಿ ಪರಿಷ್ಕರಿಸಲು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬೇಕು.
ಪ್ರತಿಯೊಬ್ಬ ರೈತರ ಫ್ರೂಟ್ಸ್ ಐ.ಡಿ. ನಮೂದಿಸಿದ ನಂತರ ಫ್ರೂಟ್ಸ್ ದತ್ತಾಂಶದಿಂದ ರೈತರ ಅಗತ್ಯ ಮಾಹಿತಿ ಲಭ್ಯವಾಗಲಿದೆ. ಮಾಹಿತಿಯಲ್ಲಿ ರೈತರ ಹೆಸರು, ವಿಳಾಸ, ಜಾತಿ, ವಯಸ್ಸು, ಮೊಬೈಲ್ ಸಂಖ್ಯೆ, ಜಮೀನು ಮತ್ತು ಬೆಳೆದಿರುವ ಬೆಳೆಯ ವಿವರಗಳು ಹಾಗೂ ರೈತರ ಬ್ಯಾಂಕ್ ಖಾತೆಯ ವಿವರಗಳು ಲಭ್ಯವಿರುತ್ತವೆÉ. ಹಾಗಾಗಿ ಪ್ರತ್ಯೇಕವಾಗಿ ಬೇರೆ ಯಾವುದೇ ದಾಖಲೆ ನೀಡುವ ಅವಶ್ಯಕತೆ ಇಲ್ಲಾ. ಫ್ರೂಟ್ಸ್ ದತ್ತಾಂಶದನ್ವಯ ರೈತರ ಬೆಳೆ ಸಮೀಕ್ಷೆ ವಿವರದಂತೆ ಬೆಳೆ ವಿಸ್ತೀರ್ಣಕ್ಕನುಗುಣವಾಗಿ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬಹುದಾದ ಗರಿಷ್ಠ ಪ್ರಮಾಣವನ್ನು ನಿಗದಿಪಡಿಸಲಾಗುತ್ತದೆ.
ಖರೀದಿ ಕೇಂದ್ರಗಳಲ್ಲಿ ನೊಂದಣಿ ಮಾಡಿದಾಗ ರೈತರಿಗೆ ತಮ್ಮ ಜಮೀನು ಮತ್ತು ಬೆಳೆ ವಿವರ ನೋಡಲು ಅವಕಾಶವಿದೆ. ರೈತರು ಖರೀದಿ ವಿವರಗಳನ್ನು ಒಪ್ಪಿ ನಮೂದಿಸಿದ ನಂತರ ಸ್ವೀಕೃತಿಯನ್ನು ಮುದ್ರಿಸಿ ರೈತರರಿಗೆ ನೀಡಲಾಗುವುದು. ರೈತರು ಭತ್ತ, ರಾಗಿ, ಜೋಳ ಸರಬರಾಜು ಮಾಡುವಾಗ ಎಫ್.ಎ.ಕ್ಯೂ ಗುಣಮಟ್ಟವನ್ನು ಪರಿಶೀಲಿಸಿ ಖರೀದಿಸಲಾಗುವುದು.
ಬೆಳೆಗಳ ಖರೀದಿ ಮಿತಿ: ಭತ್ತವನ್ನು ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 25 ಕ್ವಿಂಟಾಲ್ ನಂತೆ ಗರಿಷ್ಠ 40ಕ್ವಿಂ ಮೀರದಂತೆ ಖರೀದಿಸತಕ್ಕದ್ದು.
ಜೋಳವನ್ನು ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಠ 20ಕ್ವಿಂ ಮೀರದಂತೆ ಖರೀದಿಸತಕ್ಕದ್ದು. ರಾಗಿಯನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಠ 20ಕ್ವಿಂ ಮೀರದಂತೆ ಖರೀದಿಸತಕ್ಕದ್ದು ಎಂದು ತಿಳಿಸಿದ್ದಾರೆ.
*ಹಣಪಾವತಿ: ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ, ಜೋಳ ಸರಬರಾಜು ಮಾಡಿದ ರೈತರಿಗೆ ಅವರು ಕೃಷಿ ಇಲಾಖೆಯಲ್ಲಿ ನೊಂದಾಯಿಸಿಕೊಂಡಿರುವ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಹಣ ಪಾವತಿಸಲಾಗುವುದು.
ಮಧ್ಯವರ್ತಿಗಳು, ಏಜೆಂಟರ್ಗಳು ಖರೀದಿ ಕೇಂದ್ರಗಳಿಗೆ ಭತ್ತವನ್ನು ತಂದಲ್ಲಿ ಅಂತಹವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಪವನ್ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಬೆಂಬಲ ಬೆಲೆ ಯೋಜನೆ ಬಗ್ಗೆ ರೈತರಿಗೆ ಯಾವುದೇ ಸಮಸ್ಯೆಗಳಿದ್ದರೆ ತಾಲ್ಲೂಕಿನ ತಹಸಿಲ್ದಾರ್, ಕೃಷಿ ಅಧಿಕಾರಿ, ಎ.ಪಿ.ಎಂ.ಸಿ ಕಾರ್ಯದರ್ಶಿ, ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಪ್ರಧಾನ ಕಾರ್ಯದರ್ಶಿ ಜಿ.ಕೆ.ವೆಂಕೆಟೇಶ ಅವರ ಮೊ.9036484002 ಹಾಗೂ ಸಹಾಯಕ ಕಾರ್ಯದರ್ಶಿಗಳಾದ ಡಿ.ಎಂ.ಆಶಿಕ್ ಆಲಿ ಅವರ ಮೊ.9686935278 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.