ಮುಂಬೈ: ಮಧ್ಯಪ್ರದೇಶದ ನಂತರ, ಮಹಾರಾಷ್ಟ್ರದ ಆಡಳಿತಾರೂಢ ಬಿಜೆಪಿಯ ನಾಯಕರೊಬ್ಬರು ಮುಂಬರುವ ಶಾರುಖ್ ಖಾನ್-ದೀಪಿಕಾ ಪಡುಕೋಣೆ ನಟನೆಯ ಚಿತ್ರ ‘ಪಠಾಣ್’ ಚಿತ್ರದ ಬಗ್ಗೆ ಮಾತನಾಡಿದ್ದು, ʻಹಿಂದುತ್ವವನ್ನು ಅವಮಾನಿಸುವ ಚಿತ್ರಕ್ಕೆ ನಮ್ಮ ರಾಜ್ಯದಲ್ಲಿ ಅನುಮತಿಯಿಲ್ಲʼ ಎಂದಿದ್ದಾರೆ.
ಮುಂದಿನ ತಿಂಗಳ ಬಿಡುಗಡೆಗೆ ಮುನ್ನ ಪ್ರಚಾರದ ಭಾಗವಾಗಿ ಬಿಡುಗಡೆಯಾದ ‘ಬೇಷರಂ ರಂಗ್’ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರ “ಅಶ್ಲೀಲ” ಬಿಕಿನಿಗಾಗಿ “ಪವಿತ್ರ ಬಣ್ಣದ ಕೇಸರಿ ಬಣ್ಣ” ಬಳಕೆ ಮಾಡಲಾಗಿದ್ದು, ಈ ಬಗ್ಗೆ ಹಿಂದುತ್ವವಾದಿಗಳು ಮತ್ತು ಬಿಜೆಪಿ ನಾಯಕರು ಕೋಮುವಾದ ದೃಷ್ಠಿ ಬೀರುತ್ತದೆ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ಅವರು, ʻಹಿಂದುತ್ವವನ್ನು ಅವಮಾನಿಸುವ ಯಾವುದೇ ಚಲನಚಿತ್ರ ಅಥವಾ ಧಾರಾವಾಹಿಯನ್ನು ಮಹಾರಾಷ್ಟ್ರದಲ್ಲಿ ಅನುಮತಿಸಲಾಗುವುದಿಲ್ಲʼ ಎಂದಿದ್ದಾರೆ.
ಪಠಾಣ್ ಚಿತ್ರದ ‘ಬೇಷರಂ ರಂಗ್’ ಹಾಡು ಬಿಡುಗಡೆಯಾದಾಗಿಂದ ಹಲವರು ದೀಪಿಕಾ ಪಡುಕೋಣೆ ಧರಿಸಿರುವ ವಸ್ತ್ರದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಮಧ್ಯಪ್ರದೇಶ: ʻನಾಲ್ಕು ಕಾಲುʼಗಳೊಂದಿಗೆ ಹೆಣ್ಣು ಮಗು ಜನನ | Baby Girl Born With Four Legs
ಮಧ್ಯಪ್ರದೇಶ: ʻನಾಲ್ಕು ಕಾಲುʼಗಳೊಂದಿಗೆ ಹೆಣ್ಣು ಮಗು ಜನನ | Baby Girl Born With Four Legs