ಮಂಗಳೂರು : ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅವಧಿಯಲ್ಲೇ ಉಗ್ರ ಚಟುವಟಿಕೆಗಳು ಆರಂಭವಾಗಿವೆ. ದೇಶದಲ್ಲಿ ಭಯೋತ್ಪಾದನೆಗೆ ಕಾಂಗ್ರೆಸ್ ಪಕ್ಷವೇ ಪ್ರೇರಣೆ ನೀಡಿತ್ತು. ಕಾಶ್ಮೀರದಲ್ಲಿ ಆರಂಭವಾದ ಭಯೋತ್ಪಾದನೆ ಇಡೀ ದೇಶಕ್ಕೆ ಹಬ್ಬಿತ್ತು ಎಂದು ವಾಗ್ದಾಲಿ ನಡೆಸಿದ್ದಾರೆ.
ಉಗ್ರರ ಎನ್ ಕೌಂಟರ್ ಆದ್ರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಕಣ್ಣೀರುಡುತ್ತಾರೆ. ತನಿಖೆ ಆದ ಮೇಲೆಯೇ ಪೊಲೀಸರು ಶಾರಿಕ್ ನನ್ನು ಉಗ್ರ ಅಂತಿದ್ದಾರೆ. ಪೊಲೀಸರ ಕಾರ್ಯ ಪ್ರಶ್ನೆ ಮಾಡುವ ಕೆಲಸ ಮಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಭಯೋತ್ಪಾದನೆಗೆ ಪ್ರೇರಣೆ ನೀಡುವಂತಾದು. ಕಾಂಗ್ರೆಸ್ ಅಧಿಕಾರಕ್ಕೊಸ್ಕರ ಉಗ್ರರ ಪರವಾದ ಮಾನಸಿಕತೆ ಹೊಂದಿದೆ ಎಂದು ಕಿಡಿಕಾರಿದೆ.