ಬಿಹಾರ : ಬಿಹಾರದ 42 ವರ್ಷದ ಶಿಕ್ಷಕನೊಬ್ಬ ತನ್ನ 20 ವರ್ಷದ ವಿದ್ಯಾರ್ಥಿಯನ್ನು ಮದುವೆಯಾದ ಘಟನೆ ಬಿಹಾರದಲ್ಲಿ ನಡೆದಿದೆ.
20 ವರ್ಷದ ಶ್ವೇತಾ ಕುಮಾರಿ, ರೋಸ್ಡಾ ಬಜಾರ್ನಲ್ಲಿ ತನ್ನ ಇಂಗ್ಲಿಷ್ ಶಿಕ್ಷಕ ಸಂಗೀತ್ ಕುಮಾರ್ ಅವರನ್ನು ಮದುವೆಯಾಗಿದ್ದಾರೆ. ಈ ವಿವಾಹವು ರೋಸ್ಡಾ ಥಾನೇಶ್ವರ ದೇವಾಲಯದಲ್ಲಿ ನಡೆದಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ. ಆದರೆ 22 ವರ್ಷಗಳ ವಯಸ್ಸಿನ ವ್ಯತ್ಯಾಸವು ಅವರ ನಿರ್ಧಾರದ ಮೇಲೆ ಪರಿಣಾಮ ಬೀರಲಿಲ್ಲ. ಶಿಕ್ಷಕನ ಹೆಂಡತಿ ಕೆಲವು ವರ್ಷಗಳ ಹಿಂದೆ ನಿಧನ ಹೊಂದಿದ್ದರಿಂದ ಈತ ವಿದ್ಯಾರ್ಥಿಯನ್ನೇ ವರಿಸಿದ್ದಾನೆ.
ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಮದುವೆ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ಹಲವು ಕಮೆಂಟ್ ಗಳು ಬಂದಿದೆ. ಸಾಮಾಜಿಕ ಕಟ್ಟುಪಾಡುಗಳಿಗಿಂತ ಪರಸ್ಪರ ಪ್ರೀತಿಯನ್ನು ಆರಿಸಿಕೊಂಡಿದ್ದಕ್ಕಾಗಿ ಅನೇಕರು ಈ ಜೋಡಿಯನ್ನು ಶ್ಲಾಘಿಸಿದರೆ, ಇತರರು ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದರು. “ಇದು ಪ್ಯಾರ್ ಅಂಧಾ ಹೋಟಾ ಎಂದು ಸಾಬೀತುಪಡಿಸುತ್ತದೆ” ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಪ್ರೀತಿ ಕುರುಡು ಎಂದು ಹೇಳಿದ್ದಾರೆ. ಇನ್ನೊಬ್ಬ “ಶಿಕ್ಷಕರಿಗೆ ನೈತಿಕ ಮೌಲ್ಯಗಳಿಲ್ಲ ಎಂದು ಹೇಳಿದ್ದಾರೆ.
#Bihar #Marriage #love pic.twitter.com/2oCo8qCFIN
— RAJ (@Raj19972Raj) December 11, 2022