ಬೆಂಗಳೂರು : ಪ್ರೀತಿಸಿದ ಹುಡುಗಿ ಕೈ ಕೊಟ್ಟಿದ್ದಕ್ಕೆ ‘ಪಾಗಲ್ ಪ್ರೇಮಿ’ಯೊಬ್ಬ ಪ್ರೇಯಸಿಯ ಸ್ಕೂಟರ್ ಗೆ ಬೆಂಕಿ ಹಚ್ಚುವ ಮೂಲಕ ಸೇಡು ತೀರಿಸಿಕೊಂಡಿದ್ದಾನೆ.
ವಿಕ್ರಂ ಎಂಬಾತ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು, ಯುವಕ ಡ್ರಗ್ಸ್ ಪ್ರಕರಣದಲ್ಲಿ ಶಾಮೀಲಾಗಿ ಜೈಲಿಗೆ ಕೂಡ ಹೋಗಿದ್ದನು. ತನ್ನ ಪ್ರೇಯಸಿಯೇ ನನ್ನನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾಳೆ ಎಂದು ಶಂಕಿಸಿ ಈತ ಈ ರೀತಿ ಕೃತ್ಯ ಎಸಗಿದ್ದಾನೆ.
ಕೆಲವು ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಂದ ವಿಕ್ರಂ ಆಕೆಯ ಮೇಲಿದ್ದ ಕೋಪವನ್ನು ಬೈಕ್ ಗೆ ಬೆಂಕಿ ಹಚ್ಚುವ ಮೂಲಕ ತೀರಿಸಿಕೊಂಡಿದ್ದಾನೆ. ವಿಕ್ರಂ ಪ್ರೇಯಸಿ ವಾಹನಕ್ಕೆ ಬೆಂಕಿ ಹಚ್ಚುವ ದೃಶ್ಯಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಹಿನ್ನೆಲೆ ಮತ್ತೆ ಪೊಲೀಸರು ವಿಕ್ರಂನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
‘ಯಡಿಯೂರಪ್ಪ ನಮ್ಮ ಪಿತಾಮಹ’ : ‘BSY’ ಹಾಡಿ ಹೊಗಳಿದ ಜೆ.ಪಿ ನಡ್ಡಾ |J.P Nadda