ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೊರೊನಾ ಮಹಾಮಾರಿಯಿಂದ ಸಾಕಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಅನೇಕ ಜನರು ಕೆಲಸ ಹುಡುಕಲು ಸಾಧ್ಯವಾಗದ ಕಾರಣ ಸಣ್ಣ ವ್ಯವಹಾರಗಳನ್ನು ಆರಿಸಿಕೊಳ್ಳುತ್ತಾರೆ. ಅಂತಹ ಸಂದರ್ಭಗಳಲ್ಲಿ, ಅನೇಕ ಜನರು ಬುದ್ಧಿವಂತಿಕೆಯಿಂದ ಆನೇಕ ವ್ಯವಹಾರಗಳನ್ನ ಮಾಡುತ್ತಿದ್ದಾರೆ. ಅದ್ರಂತೆ, ಅನೇಕ ಜನರು ವಿವಿಧ ಕೃಷಿ ವ್ಯವಹಾರಗಳನ್ನ ಆರಿಸಿಕೊಳ್ಳುತ್ತಿದ್ದಾರೆ. ಕೃಷಿಯಲ್ಲಿ ಅನುಭವವಿರುವವರಿಗೆ ವಿವಿಧ ವ್ಯವಹಾರಗಳು ಲಭ್ಯವಿವೆ. ಉತ್ತಮ ಆದಾಯ ಗಳಿಸಲು ಬಯಸುವವರು ಅಲೋವೆರಾ ಕೃಷಿ ಆರಂಭಿಸುವುದು ಉತ್ತಮ ಎನ್ನುತ್ತಾರೆ ಕೃಷಿ ತಜ್ಞರು.
ಅಲೋವೆರಾ ಇಂತಹ ಔಷಧೀಯ ಸಸ್ಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಔಷಧಿಗಳ ತಯಾರಿಕೆಯ ಹೊರತಾಗಿ, ಇದನ್ನ ಸೌಂದರ್ಯವರ್ಧಕಗಳು ಇತ್ಯಾದಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದಕ್ಕೆ ಉತ್ತಮ ಬೇಡಿಕೆ ಇರುವುದರಿಂದ ಭಾರತದಲ್ಲಿ ಜನರು ಇದನ್ನು ವ್ಯಾಪಕವಾಗಿ ಬೆಳೆಸುತ್ತಾರೆ. ಈ ಮೂಲಕ ಉತ್ತಮ ಆದಾಯವನ್ನೂ ಪಡೆಯುತ್ತಿದ್ದಾರೆ. ಅಲೋವೆರಾ ಕೃಷಿ ಮಾಡುವಾಗ ಕೆಲವು ವಿಷಯಗಳನ್ನ ನೆನಪಿಟ್ಟುಕೊಳ್ಳುವುದು ಮುಖ್ಯ. ಮೊದಲನೆಯದಾಗಿ ನೀರು ನಿಲ್ಲದ ಸ್ಥಳಗಳಲ್ಲಿ ಮಾತ್ರ ಕೃಷಿ ಮಾಡಬೇಕು. ಇದರೊಂದಿಗೆ ಮರಳು ಮಣ್ಣು ಅದರ ಕೃಷಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಒಂದು ಅಲೋವೆರಾ ಗಿಡದ ನಡುವಿನ ಅಂತರ ಕನಿಷ್ಠ 2 ಅಡಿ ಇರಬೇಕು. ಹೀಗೆ ಮಾಡುವುದರಿಂದ ಅದರ ಬೆಳವಣಿಗೆ ಚೆನ್ನಾಗಿ ಆಗಲಿದೆ.
ಯಾವ ತಿಂಗಳಲ್ಲಿ ಅಲೋವೆರಾ ಹೆಚ್ಚಾಗಿ ಬೆಳೆಯಲಾಗುತ್ತದೆ?
ತಜ್ಞರ ಪ್ರಕಾರ, ಅಲೋವೆರಾವನ್ನು ವರ್ಷದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಬೆಳೆಸಲಾಗುತ್ತದೆ. ಆದ್ರೆ, ನೀವು ಬಯಸಿದರೆ ನೀವು ಯಾವಾಗಲೂ ಬೆಳೆಸಬಹುದು. ವಿಶೇಷವೆಂದರೆ ಈ ಅಲೋವೆರಾ ವರ್ಷವಿಡೀ ಚೆನ್ನಾಗಿ ಇಳುವರಿ ನೀಡುತ್ತದೆ. ಈ ಗಿಡದ ವಿಶೇಷತೆ ಏನೆಂದರೆ ಮುಳ್ಳುಗಳಿರುವುದರಿಂದ ಯಾವ ಪ್ರಾಣಿಯೂ ಇದನ್ನ ತಿನ್ನುವುದಿಲ್ಲ.
ಗಳಿಕೆ ಎಷ್ಟು?
ಒಂದು ಎಕರೆ ಭೂಮಿಯಲ್ಲಿ ಕನಿಷ್ಠ 12,000 ಆಲೋವೆರಾ ಮರಗಳನ್ನ ನೆಡಬಹುದು ಎಂದು ತಜ್ಞರು ಹೇಳುತ್ತಾರೆ. ಒಂದು ಮರ ನೆಡಲು ಕನಿಷ್ಠ 4 ರೂಪಾಯಿ ಖರ್ಚಾಗುತ್ತೆ. ಹೀಗಾಗಿ ಈ ಕೃಷಿ ಆರಂಭಿಸಲು ಕನಿಷ್ಠ 40ರಿಂದ 50 ಸಾವಿರ ರೂಪಾಯಿ ವೆಚ್ಚವಾಗಬೋದು. ಆಲೋವೆರಾ ಬೆಳೆದ ನಂತ್ರ ಒಂದನ್ನ ಕನಿಷ್ಠ 10 ರೂಪಾಯಿವರೆಗೆ ಮಾರಾಟ ಮಾಡಬಹುದು. ಈ ಸಂದರ್ಭದಲ್ಲಿ ನೀವು ಒಟ್ಟು 1.20 ಲಕ್ಷಗಳವರೆಗೆ ಗಳಿಸಬೋದು. ಅದ್ರಂತೆ, ಕೇವಲ ಒಂದು ಬೆಳೆಯಿಂದ ಸರಿಸುಮಾರು 80 ಸಾವಿರ ರೂಪಾಯಿವರೆಗೆ ಲಾಭ ಗಳಿಸಬೋದು.