ಬೆಂಗಳೂರು : ಮಂಗಳೂರು ಬಾಂಬ್ ಸ್ಪೋಟ ಪ್ರಕರಣದ ಕುರಿತು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದು, ಡಿಕೆಶಿ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಈ ಕುರಿತು ಡಿ.ಕೆ ಶಿವಕುಮಾರ್ ಸಮರ್ಥನೆ ನೀಡಿದ್ದು, ಮಂಗಳೂರು ಬಾಂಬ್ ಸ್ಪೋಟ ಪ್ರಕರಣವನ್ನು ನಾನು ಸಮರ್ಥಿಸಿಕೊಂಡಿಲ್ಲ, ಅದೊಂದು ಇನ್ಸಿಡೆಂಟ್ ಎಂದೆ, ನಾನು ಯಾವ ಟೆರರಿಸ್ಟ್ ಗೂ ಬೆಂಬಲ ನೀಡಲ್ಲ, ಈ ಹೇಳಿಕೆಗೆ ಕ್ಷಮೆ ಕೂಡ ಕೇಳೋದಿಲ್ಲ ಎಂದು ಡಿಕೆಶಿ ಪ್ರತಿಕ್ರಿಯೆ ನೀಡಿದರು. ಮಂಗಳೂರು ಸ್ಪೋಟ ಪ್ರಕರಣವನ್ನು ಬಿಜೆಪಿ ವೈಭವೀಕರಿಸಿದೆ ಎಂದು ಹೇಳಿದೆ ಅಷ್ಟೇ ಎಂದರು.
ಡಿಕೆಶಿ ಹೇಳಿದ್ದೇನು..?
ಕುಕ್ಕರ್ ಬ್ಲಾಸ್ಟ್ ಪೂರ್ವನಿಯೋಜಿತ ಎಂದು ಹೇಗೆ ಹೇಳುತ್ತೀರಿ ಎಂದು ಕೇಳಿದಾಗ ‘ಕುಕ್ಕರ್ ಬ್ಲಾಸ್ಟ್ ಪ್ರಕರಣದ ತನಿಖೆಗೂ ಮುನ್ನವೇ ಅಧಿಕಾರಿಗಳು ಇದನ್ನು ಭಯೋತ್ಪಾದಕ ಕೃತ್ಯ ಎಂದು ಹೇಗೆ ಘೋಷಿಸಿದರು? ಇದರ ಹಿಂದೆ ಯಾವ ಉಗ್ರನಿದ್ದಾನೆ? ಯಾವ ಸಂಘಟನೆ ಇದೆ? ಯಾರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ. ತನಿಖೆ ಏನಾಯ್ತು? ಮತ ಮಾಹಿತಿ ಕಳವು ಪ್ರಕರಣವನ್ನು ಮುಚ್ಚಿಹಾಕಲು ಈ ಷಡ್ಯಂತ್ರ ರೂಪಿಸಿದ್ದಾರೆ. ಮತದಾನದ ಕಳವು ಇಡೀ ದೇಶದಲ್ಲಿ ಆಗಿರಲಿಲ್ಲ. ಈಗ ಇದನ್ನು ಮಾಡಿ ರಾಜ್ಯಕ್ಕೆ ಕಪ್ಪು ಚುಕ್ಕೆ ತಂದಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
‘ಡಿ.ಕೆ ಶಿವಕುಮಾರ್’ನಿಂದ ‘ಕಾಂಗ್ರೆಸ್ ಸಮೀಕ್ಷೆ’ ರಿಸಲ್ಟ್ ಔಟ್: ‘ಕೈ ಪಕ್ಷ’ ಎಷ್ಟು ಗೆಲುವು ಗೊತ್ತಾ?
‘ನಾನು ಯಾವ ಟೆರರಿಸ್ಟ್ ಗೂ ಬೆಂಬಲ ನೀಡಲ್ಲ’ : ಡಿ.ಕೆ ಶಿವಕುಮಾರ್ ಸಮರ್ಥನೆ