ಚಿತ್ರದುರ್ಗ : ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಠ, ಎಸ್ ಜೆ ಎಮ್(SJM) ವಿದ್ಯಾಪೀಠದ ಆಡಳಿತದಲ್ಲಿ ಹಸ್ತಕ್ಷೇಪ ಮಾಡದಂತೆ ಮುರುಘಾ ಶರಣರಿಗೆ ಕೋರ್ಟ್ ಸೂಚನೆ ನೀಡಿದೆ.
ಚಿತ್ರದುರ್ಗದ 2 ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಠ, ಎಸ್ ಜೆ ಎಮ್ ವಿದ್ಯಾಪೀಠದಲ್ಲಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡದಂತೆ ಮುರುಘಾ ಶರಣರಿಗೆ ಸೂಚನೆ ನೀಡಿದೆ. ಧಾರ್ಮಿಕ ಕೇಂದ್ರ ದುರ್ಬಳಕೆ ಹಿನ್ನೆಲೆ ನ್ಯಾಯಾಧೀಶೆ ಬಿ.ಕೆ ಕೋಮಲಾ ಆದೇಶ ಹೊರಡಿಸಿದ್ದಾರೆ.
ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮುರುಘಾ ಶ್ರೀಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮುರುಘಾ ಶ್ರೀ ವಿರುದ್ಧ ಸಾಲು ಸಾಲು ಅತ್ಯಾಚಾರ ಆರೋಪ ಮಾಡಲಾಗಿದ್ದು, ಶ್ರೀಗಳು ಸದ್ಯ ಸೆರೆಮನೆವಾಸದಲ್ಲಿದ್ದಾರೆ.
ಮಹಿಳಾಮಣಿಗಳೇ, ಸರ್ಕಾರದ ಈ ಯೋಜನೆ ಮೂಲಕ ಉಚಿತವಾಗಿ ‘ಹೊಲಿಗೆ ಯಂತ್ರ’ ಪಡೆಯ್ಬೋದು, ನೀವೂ ಅರ್ಜಿ ಸಲ್ಲಿಸಿ
Job Alert: ಡಿ.21ರಂದು ಜಿಲ್ಲಾ ಕಾರ್ಯಕ್ರಮ ಸಂಯೋಜಕರ ನೇಮಕಾತಿ ನೇರ ಸಂದರ್ಶನ