ನವದೆಹಲಿ: ದಕ್ಷಿಣ ದೆಹಲಿಯ ಮೆಹ್ರೌಲಿ ಅರಣ್ಯದಲ್ಲಿ ಪತ್ತೆಯಾದ ಮೂಳೆಗಳು ಹತ್ಯೆಯಾದ ಶ್ರದ್ಧಾ ವಾಕರ್ದೇ ಎಂದು ದೃಢ ಪಟ್ಟಿದೆ.
ಮೆಹ್ರೌಲಿ ಅರಣ್ಯ ಪ್ರದೇಶಲ್ಲಿ ಪತ್ತೆಯಾದ ಛಿದ್ರಗೊಂಡ ಮೂಳೆಗಳು ಶ್ರದ್ಧಾ ವಾಕರ್ ಅವರ ತಂದೆಯ ಡಿಎನ್ಎಯೊಂದಿಗೆ ಹೊಂದಿಕೆಯಾಗಿದೆ ಎಂದು ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ದೃಢಪಡಿಸಿದೆ. ಇನ್ನೂ, ಆರೋಪಿ ಅಫ್ತಾಬ್ನ ಪಾಲಿಗ್ರಾಫ್ ಪರೀಕ್ಷೆಯ ವಿವರವಾದ ವರದಿಯನ್ನು ದೆಹಲಿ ಪೊಲೀಸರು ಸ್ವೀಕರಿಸಿದ್ದಾರೆ.
ಶ್ರದ್ಧಾ ವಾಕರ್ಳನ್ನು ಆಕೆಯ ಲಿವ್ ಇನ್ ಪಾಲುದಾರ ಆಫ್ತಾಬ್ ಪೂನಾವಾಲಾ ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ಅವುಗಳನ್ನು ಫ್ರಿಡ್ಜ್ನಲ್ಲಿ ಸಂಗ್ರಹಿಸಿಟ್ಟು, ಹಲವಾರು ದಿನಗಳವರೆಗೆ ದಕ್ಷಿಣ ದೆಹಲಿಯ ಮೆಹ್ರಾಲಿ ಅರಣ್ಯ ಪ್ರದೇಶದಾದ್ಯಂತ ಎಸೆದಿದ್ದ. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು, ಶ್ರದ್ಧಾಳ ದೇಹದ ಭಾಗಗಳ ಪತ್ತೆಗೆ ಶ್ರಮಿಸುತ್ತಿದ್ದಾರೆ.
ಇಲ್ಲಿಯವರೆಗೂ ಅರಣ್ಯದಲ್ಲಿ ಶ್ರದ್ಧಾ ವಾಕರ್ಳ ದವಡೆ ಸೇರಿದಂತೆ 13 ಮೂಳೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಭಾರತದ ಅತ್ಯಂತ ದುಬಾರಿ ಕಾರು ಖರೀದಿಸಿದ ಹೈದರಾಬಾದ್ ಉದ್ಯಮಿ… ಇದರ ಬೆಲೆ ಎಷ್ಟು ಗೊತ್ತಾ?
BIG NEWS : ಅಂಬುಜಾ, ಎಸಿಸಿ ಸಿಮೆಂಟ್ ಘಟಕಗಳು ಏಕಾಏಕಿ ಬಂದ್, ನಿರುದ್ಯೋಗಿಗಳಾದ ನೂರಾರು ಕಾರ್ಮಿಕರು
ಭಾರತದ ಅತ್ಯಂತ ದುಬಾರಿ ಕಾರು ಖರೀದಿಸಿದ ಹೈದರಾಬಾದ್ ಉದ್ಯಮಿ… ಇದರ ಬೆಲೆ ಎಷ್ಟು ಗೊತ್ತಾ?