ನವದೆಹಲಿ : ನಿನ್ನೆ ದೆಹಲಿಯಲ್ಲಿ 17 ವರ್ಷದ ಶಾಲಾ ಬಾಲಕಿಯ ಮೇಲೆ ಮೂವರು ಆಸಿಡ್ ದಾಳಿ ನಡೆಸಿದ್ದರು. ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳು ಕೃತ್ಯವೆಸಗಿದ ನಂತ್ರ, ತನಿಖಾಧಿಕಾರಿಗಳ ದಾರಿತಪ್ಪಿಸಲು ಸೂಕ್ಷ್ಮವಾಗಿ ದಾಳಿಯನ್ನು ಯೋಜಿಸಿದ್ದರು.
ನೈಋತ್ಯ ದೆಹಲಿಯ ದ್ವಾರಕಾದಲ್ಲಿ ಆಸಿಡ್ ದಾಳಿ ನಡೆದಿದ್ದು, ಗಂಭೀರ ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳನ್ನಾಧರಿಸಿಘಟನೆ ನಡೆದ 12 ಗಂಟೆಗಳಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೂವರು ಆರೋಪಿಗಳನ್ನು ಸಚಿನ್ ಅರೋರಾ (20), ಹರ್ಷಿತ್ ಅಗರ್ವಾಲ್(19), ವೀರೇಂದ್ರ ಸಿಂಗ್(22) ಎಂದು ಗುರುತಿಸಲಾಗಿದೆ.
ಇನ್ನೂ, ಆರೋಪಿಗಳು ಫ್ಲಿಪ್ಕಾರ್ಟ್ನಿಂದ(Flipkart) ಆಸಿಡ್ ಅನ್ನು ಆರ್ಡರ್ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಾಗರ್ ಪ್ರೀತ್ ಹೂಡಾ ಹೇಳಿಕೆಯಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಮಹಿಳಾ ಆಯೋಗವು ಆಸಿಡ್ ಸುಲಭ ಲಭ್ಯತೆ ಕುರಿತು ಫ್ಲಿಪ್ಕಾರ್ಟ್, ಅಮೇಜಾನ್(Amazon) ಗೆ ನೋಟಿಸ್ ಕಳುಹಿಸಿದೆ ಎನ್ನಲಾಗುತ್ತಿದೆ.
ಆಸಿಡ್ ದಾಳಿಗಳು ಹೆಚ್ಚಾದ ಹಿನ್ನೆಲೆಯಲ್ಲಿ 2013 ರಲ್ಲಿ ಸುಪ್ರೀಂ ಕೋರ್ಟ್ ಕೌಂಟರ್ನಲ್ಲಿ ಆಸಿಡ್ ಮಾರಾಟವನ್ನು ನಿಷೇಧಿಸಿತ್ತು. ನ್ಯಾಯಾಲಯವು ಆಸಿಡ್ ಮಾರಾಟ ಮಾಡುವವರಿಗೆ ನಿರ್ಬಂಧಗಳನ್ನು ವಿಧಿಸಿದೆ. ಪರವಾನಗಿ ಪಡೆದ ಅಂಗಡಿ ಮಾಲೀಕರು ಮಾತ್ರ ಆಸಿಡ್ ಮಾರಾಟ ಮಾಡಬಹುದು.ಅವರು ನೋಂದಾಯಿಸಿಕೊಳ್ಳಬೇಕು ಮತ್ತು ಅವರಿಂದ ಆಸಿಡ್ ಖರೀದಿಸುವವರ ರಿಜಿಸ್ಟರ್ ಅನ್ನು ಅವರು ಇಟ್ಟುಕೊಳ್ಳಬೇಕು. ಆಸಿಡ್ ಖರೀದಿಸುವವರು ಕಾರಣ ಮತ್ತು ಗುರುತಿನ ಪುರಾವೆಯನ್ನೂ ನೀಡಬೇಕು.
ಆಯೋಗದ ಪುನರಾವರ್ತಿತ ಶಿಫಾರಸುಗಳ ಹೊರತಾಗಿಯೂ, ಆಸಿಡ್ ಚಿಲ್ಲರೆ ಮಾರಾಟವನ್ನು ನಿಷೇಧಿಸದಿರುವುದು ದುರದೃಷ್ಟಕರವಾಗಿದೆ. ಆಸಿಡ್ ಅನ್ನು ಮಾರುಕಟ್ಟೆಗಳಲ್ಲಿ ಬಹಿರಂಗವಾಗಿ ,ಅನಿಯಂತ್ರಿತವಾಗಿ ಮಾರಾಟ ಮಾಡಲಾಗುತ್ತಿದೆ. ವಾಸ್ತವವಾಗಿ, ಆಸಿಡ್ ಪಡೆಯುವುದು ತರಕಾರಿಗಳನ್ನು ಖರೀದಿಸುವಷ್ಟು ಸುಲಭ! ಸರ್ಕಾರ ಆಸಿಡ್ ಚಿಲ್ಲರೆ ಮಾರಾಟವನ್ನು ನಿಷೇಧಿಸಬೇಕು ಎಂದು ದೆಹಲಿ ಮಹಿಳಾ ಸಮಿತಿಯ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ.
WATCH VIDEO: ದೆಹಲಿಯಲ್ಲಿ ಶಾಲಾ ಬಾಲಕಿ ಮೇಲೆ ಆಸಿಡ್ ದಾಳಿ, ಸಂತ್ರಸ್ತೆ ಸ್ಥಿತಿ ಗಂಭೀರ… ಘಟನೆಯ ವಿಡಿಯೋ ವೈರಲ್
BIG NEWS : ಮುಂಬೈನ ಲೋವರ್ ಪರೇಲ್ ಪ್ರದೇಶದ ಬೃಹತ್ ಕಟ್ಟಡಕ್ಕೆ ಬೆಂಕಿ ಅವಘಡ : ಶಾಕಿಂಗ್ Video Watch