ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ವಿಮಾನಗಳನೆಲ್ಲಾ ನೋಡಿದ್ದೀರಾ, ವಿಮಾನದಲ್ಲಿ ಅತ್ಯಂತ ವೇಗವಾಗಿ ತಮ್ಮ ಪ್ರಯಾಣ ಆಗುತ್ತದೆ. ಆದರೆ ವಿಶ್ವದಲ್ಲಿ ಅತಿ ಕಡಿಮೆ ವಿಮಾನ ಪ್ರಯಾಣದ ಬಗ್ಗೆ ನಿಮಗೆ ಗೊತ್ತಾ?, ಈ ವಿಮಾನ ಟೇಕ್ಆಫ್ನಿಂದ ಲ್ಯಾಂಡಿಂಗ್ಗೆ ಕೇವಲ 80 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ.
ಹೌದು, ವಿಮಾನ ಪ್ರಯಾಣ ವೆಸ್ಟ್ರೆ ಮತ್ತು ಪಾಪಾ ವೆಸ್ಟ್ರೆ ನಡುವೆ ಕೇಲವ 80 ಸೆಕೆಂಡುಗಳ ಪ್ರಯಾಣ ಮಾತ್ರ ಇರುತ್ತದೆ. ಎರಡು ದ್ವೀಪಗಳ ನಡುವೆ ಯಾವುದೇ ಸೇತುವೆ ಇಲ್ಲ, ಬಸ್ ಅಥವಾ ರೈಲು ವ್ಯವಸ್ಥೆ ಇಲ್ಲ. ಅದಕ್ಕಾಗಿಯೇ ಇಲ್ಲಿನ ಜನರು ವಿಮಾನದಲ್ಲಿ ಕುಳಿತು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸುತ್ತಾರೆ.
ಈ ಸ್ಥಳವು ಸ್ಕಾಟ್ಲೆಂಡ್ನಲ್ಲಿದೆ. ಇದನ್ನು ಆರ್ಕ್ನಿ ದ್ವೀಪ ಎಂದು ಕರೆಯಲಾಗುತ್ತದೆ. ಲೋಗನ್ ಏರ್ ಇಲ್ಲಿ ವಿಮಾನಗಳ ಸೇವೆ ನೀಡುತ್ತಿದೆ. ಸುಮಾರು 50 ವರ್ಷಗಳಿಂದ ಇಲ್ಲಿ ತನ್ನ ಸೇವೆಗಳನ್ನು ಒದಗಿಸುತ್ತಿದೆ. ಕೇವಲ 47 ಸೆಕೆಂಡುಗಳಲ್ಲಿ ವೆಸ್ಟ್ರೇನಿಂದ ಪಾಪಾ ವೆಸ್ಟ್ರೇಗೆ ತಲುಪಬಹುದು. ಈ ಎರಡು ದ್ವೀಪಗಳ ನಡುವೆ ಚಲಿಸುವ ಈ ವಿಮಾನಗಳಲ್ಲಿ ಕೇಲವ 8 ಆಸನಗಳಿತ್ತವೆ. ಹೆಚ್ಚಿನ ಪ್ರವಾಸಿಗರು ಮತ್ತು ಸ್ಥಳೀಯ ಜನರು ಈ ವಿಮಾನ ಸೇವೆಯ ಪ್ರಯೋಜನವನ್ನು ಪಡೆಯುತ್ತಾರೆ.
ವಿಮಾನ ಪ್ರಯಾಣದಲ್ಲಿ ವಿನಾಯಿತಿ
ವಿಮಾನ ಪ್ರಯಾಣ ದರ ದುಬಾರಿ. ಆದರೆ ಅಲ್ಲಿನ ಸರ್ಕಾರ ಜನರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ನೀಡುತ್ತದೆ. ನೀವು ಈ ವಿನಾಯಿತಿಯನ್ನು ಭಾರತದ ಭಾಷೆಯಲ್ಲಿ ಸಬ್ಸಿಡಿ ಎಂದು ಕರೆಯಬಹುದು. ಪ್ರಸ್ತುತ, ಕಂಪನಿಗಳು ಒಂದು ದ್ವೀಪದಿಂದ ಇನ್ನೊಂದು ದ್ವೀಪಕ್ಕೆ ಹೋಗಲು 17 ರಿಂದ 18 ಪೌಂಡ್ಗಳನ್ನು ವಿಧಿಸುತ್ತವೆ.
ಎರಡೂ ದ್ವೀಪಗಳ ಅಂತರ 2.7 ಕಿ.ಮೀ.
ವೆಸ್ಟ್ರೋ ಮತ್ತು ಪಾಪಾ ವೆಸ್ಟ್ರೆ ನಡುವೆ 2.7 ಕಿಲೋಮೀಟರ್ ದೂರವಿದೆ. ಇವೆರಡರ ನಡುವೆ ಸೇತುವೆ ನಿರ್ಮಿಸುವುದು ತುಂಬಾ ದುಬಾರಿ. ವೆಸ್ಟ್ರೆಯಲ್ಲಿ 600 ಜನರು ಮತ್ತು ಪಾಪಾ ವೆಸ್ಟ್ರೆಯಲ್ಲಿ ಸುಮಾರು 90 ಜನರು ವಾಸಿಸುತ್ತಿದ್ದಾರೆ. ಭಾರತದ ಯಾವುದೇ ಬಸ್ ನಿಲ್ದಾಣದಲ್ಲಿ ಬಸ್ಸುಗಳನ್ನು ನಿರ್ವಹಿಸುವಂತೆಯೇ ಇಲ್ಲಿ ವಿಮಾನವನ್ನು ನಿರ್ವಹಿಸಲಾಗುತ್ತದೆ.
BIGG NEWS: KPTCL ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ; ಪ್ರಮುಖ ಆರೋಪಿ ಬಂಧನ