ನ್ಯೂಯಾರ್ಕ್: ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಬುಧವಾರ ಅಮೆರಿಕದ ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಭಾರತದಿಂದ ಉಡುಗೊರೆಯಾಗಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯು ವಿಶ್ವಸಂಸ್ಥೆಯ ಉತ್ತರ ಲಾನ್ ಗಾರ್ಡನ್ಸ್ನಲ್ಲಿ ಶಾಶ್ವತವಾಗಿ ನೆಲೆಗೊಂಡಿರುವ ಗಾಂಧಿಯವರ ಮೊದಲ ಶಿಲ್ಪವಾಗಿದೆ.
ಜೈಶಂಕರ್ ಅವರಲ್ಲದೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, 77 ನೇ ಯುಎನ್ ಜನರಲ್ ಅಸೆಂಬ್ಲಿಯ ಅಧ್ಯಕ್ಷ ಸಿಸಾಬಾ ಕೊರೊಸಿ ಮತ್ತು ಖಾಯಂ ಪ್ರತಿನಿಧಿ ರಾಯಭಾರಿ ರುಚಿರಾ ಕಾಂಬೋಜ್ ಅವರು ಅನಾವರಣದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧೀಜಿಯವರ ಅಚ್ಚುಮೆಚ್ಚಿನ ‘ವೈಷ್ಣವ್ ಜನ್ ತೋ’ ಭಜನೆಯನ್ನು ಪಠಿಸಲಾಯಿತು ಮತ್ತು ‘ರಾಷ್ಟ್ರಪಿತ’ನಿಗೆ ಪುಷ್ಪ ನಮನ ಸಲ್ಲಿಸಲಾಯಿತು.
#WATCH | EAM Dr S Jaishankar and UN Secretary-General António Guterres unveil the bust of Mahatma Gandhi at the United Nations Headquarters in New York pic.twitter.com/CmgwB9lf43
— ANI (@ANI) December 14, 2022
ಈ ಸಮಾರಂಭದಲ್ಲಿ ಒಳಬರುವ ಸದಸ್ಯರು ಮತ್ತು ಹಿರಿಯ UN ಅಧಿಕಾರಿಗಳು ಸೇರಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರ ಉನ್ನತ ಮಟ್ಟದ ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಡಿಸೆಂಬರ್ 14-15 ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಗಳ ಅಧ್ಯಕ್ಷತೆ ವಹಿಸಲು ಜೈಶಂಕರ್ ನ್ಯೂಯಾರ್ಕ್ನಲ್ಲಿದ್ದಾರೆ. ಭಾರತವು ಡಿಸೆಂಬರ್ 2022 ಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ಹೊಂದಿದೆ.