ಮಧ್ಯಪ್ರದೇಶ: ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾನ್ ಸಿನಿಮಾದ ವಿರುದ್ಧ ರಾಜ್ಯ ಸಚಿವ ಚಿತ್ರದ ಬಗ್ಗೆ ಹೇಳಿಕೆ ನೀಡಿದ ಬೆನ್ನೆಲ್ಲೆ ಮಧ್ಯಪ್ರದೇಶದ ಇಂದೋರ್ನಲ್ಲಿ ಪಠಾನ್ ಮತ್ತು ಅದರ ಹಾಡು ಬೇಷರಂ ರಂಗ್ ವಿರುದ್ಧ ಸಂಘಟನೆಯ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಈ ಹಿಂದೆ ರಾಜ್ಯ ಸಚಿವ ನರೋತ್ತಮ್ ಮಿಶ್ರಾ ಚಿತ್ರದಲ್ಲಿ ಆಕ್ಷೇಪಾರ್ಹ ದೃಶ್ಯಗಳಿದ್ದು, ಕೇಸರಿ ವೇಷಭೂಷಣಗಳ ಬಳಕೆ ಮಾಡಲಾಗಿದೆ. ಹೀಗಾಗಿ ಚಲನಚಿತ್ರವನ್ನು ನಿಷೇಧಿಸುವಂತೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ವೀರ ಶಿವಾಜಿ ಗ್ರೂಪ್ನ ಕಾರ್ಯಕರ್ತರು ರಸ್ತೆಯಲ್ಲಿ ಜಮಾಯಿಸಿ ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅವರ ಪ್ರತಿಕೃತಿಗಳಿಗೆ ಬೆಂಕಿ ಹಚ್ಚಿ ಪ್ರತಿಟಭಟನೆ ನಡೆಸಿದ್ದಾರೆ.
ಬೇಷರಮ್ ರಂಗ್ ಹಾಡಿನ ವಿಷಯದಿಂದ ಹಿಂದೂ ಸಮುದಾಯವು ಮನನೊಂದಿದೆ ಎಂದು ಆರೋಪಿಸಿ ಮುಂದಿನ ವರ್ಷ ಜನವರಿಯಲ್ಲಿ ತೆರೆಗೆ ಬರಲಿರುವ ಚಿತ್ರವನ್ನು ನಿಷೇಧಿಸುವಂತೆ ಅವರು ಒತ್ತಾಯಿಸಿದರು.
2023 ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಪಠಾನ್ನ ಮೊದಲ ಹಾಡು ಬೇಷರಂ ರಂಗ್ ಇತ್ತೀಚೆಗೆ ರಿಲೀಸ್ ಆಗಿತ್ತು. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಪಡುಕೋಣೆ ಮತ್ತು ನಾಯಕ ನಟ ಶಾರುಖ್ ಖಾನ್ ಅವರ ಉಡುಪಿನ ಬಣ್ಣವನ್ನು ನೋಡಿ, ಅದರ ಸರಿಪಡಿಸುವಿಕೆಗೆ ಕರೆ ನೀಡಿದ ನಂತರ ಇದು ಶೀಘ್ರದಲ್ಲೇ ಚರ್ಚೆಯ ವಿಷಯವಾಯಿತು.
ಅಕ್ಟೋಬರ್ನಲ್ಲಿ ನರೋತ್ತಮ್ ಮಿಶ್ರಾ ಅವರು ರಾಮಾಯಣ ಮಹಾಕಾವ್ಯವನ್ನು ಆಧರಿಸಿದ ಬಾಲಿವುಡ್ ಚಲನಚಿತ್ರ ಆದಿಪುರುಷನ ನಿರ್ಮಾಪಕರಿಗೆ ಹಿಂದೂ ಧಾರ್ಮಿಕ ವ್ಯಕ್ತಿಗಳನ್ನು ತಪ್ಪು ರೀತಿಯಲ್ಲಿ ತೋರಿಸುವ ದೃಶ್ಯಗಳನ್ನು ತೆಗೆದುಹಾಕದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದರು.
BIGG NEWS : ಕ್ರಿಸ್ಮಸ್, ನ್ಯೂ ಇಯರ್ ಸಂಭ್ರಮ ಹಿನ್ನೆಲೆ : ಕೆಂಪೇಗೌಡ ಏರ್ಪೋರ್ಟ್ನಲ್ಲಿ ಹೆಚ್ಚಿನ ಜನದಟ್ಟನೆ