ಮುಂಬೈ (ಮಹಾರಾಷ್ಟ್ರ) : ಮುಂಬೈನಿಂದ ಗೋವಾಕ್ಕೆ ಬುಧವಾರ ಹಾರಾಟ ನಡೆಸುತ್ತಿದ್ದ ಗೋ ಫಸ್ಟ್ ವಿಮಾನ ತಾಂತ್ರಿಕ ದೋಷದಿಂದ ಮುಂಬೈಗೆ ವಾಪಸ್ ಆಗಿದೆ ಎಂದು ಗೋ ಫಸ್ಟ್ ವಕ್ತಾರರು ಮಾಹಿತಿ ನೀಡಿದ್ದಾರೆ.
“ಗೋ ಫಸ್ಟ್ ಫ್ಲೈಟ್ ಜಿ8 371 ಮುಂಬೈನಿಂದ ಗೋವಾಗೆ ತೆರಳುತ್ತಿತ್ತು. ಆದ್ರೆ, ತಾಂತ್ರಿಕ ದೋಷದಿಂದ ಮುಂಬೈಗೆ ವಾಪಸ್ ಆಗಿದೆ. ಗೋ ಫಸ್ಟ್ನಲ್ಲಿದ್ದ 181 ಪ್ರಯಾಣಿಕರು ಕೆಳಗಿಳಿಸಿ, ಅವರಿಗೆ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಲಾಯಿತು. ನಂತ್ರ ಅವರು ಮುಂಬೈಗೆ ತೆರಳಿದರು”.
ಏತನ್ಮಧ್ಯೆ, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ವಿಮಾನಯಾನ ಸಂಸ್ಥೆ ವಿಷಾದಿಸಿದೆ. “ಗೋ ಫಸ್ಟ್ನಲ್ಲಿ ಅದರ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ಅತ್ಯಂತ ಮಹತ್ವದ್ದಾಗಿದೆ. ವಿಮಾನಯಾನ ಸಂಸ್ಥೆಯು ತನ್ನ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಪ್ರಾಮಾಣಿಕವಾಗಿ ವಿಷಾದಿಸುತ್ತದೆ” ಎಂದು ಗೋ ಫಸ್ಟ್ ವಕ್ತಾರರು ಸೇರಿಸಿದ್ದಾರೆ.
BIGG NEWS : 5,8 ನೇ ತರಗತಿಗಳಿಗೆ `ಪೂರಕ ಪರೀಕ್ಷೆ’ ಇಲ್ಲ : ಶಿಕ್ಷಣ ಇಲಾಖೆ ಸೂಚನೆ
BIGG NEWS : 5,8 ನೇ ತರಗತಿಗಳಿಗೆ `ಪೂರಕ ಪರೀಕ್ಷೆ’ ಇಲ್ಲ : ಶಿಕ್ಷಣ ಇಲಾಖೆ ಸೂಚನೆ