ನವದೆಹಲಿ: ದೆಹಲಿಯಲ್ಲಿ 17 ವರ್ಷದ ಶಾಲಾ ಬಾಲಕಿಯ ಮೇಲೆ ಆಸಿಡ್ ಎಸೆದ ಆರೋಪದ ಮೂವರು ವ್ಯಕ್ತಿಗಳನ್ನು ಅರೆಸ್ಟ್ ಮಾಡಲಾಗಿದೆ. ಈ ಮೂವರು ಆರೋಪಿಗಳು ಕೃತ್ಯವೆಸಗಿದ ನಂತ್ರ, ತನಿಖಾಧಿಕಾರಿಗಳ ದಾರಿತಪ್ಪಿಸಲು ಸೂಕ್ಷ್ಮವಾಗಿ ದಾಳಿಯನ್ನು ಯೋಜಿಸಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿನ್ನೆ ಬೆಳಗ್ಗೆ ನೈಋತ್ಯ ದೆಹಲಿಯ ದ್ವಾರಕಾದಲ್ಲಿ ಆ್ಯಸಿಡ್ ದಾಳಿ ನಡೆದಿದ್ದು, ಗಂಭೀರ ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳನ್ನಾಧರಿಸಿಘಟನೆ ನಡೆದ 12 ಗಂಟೆಗಳಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೂವರು ಆರೋಪಿಗಳನ್ನು ಸಚಿನ್ ಅರೋರಾ (20), ಹರ್ಷಿತ್ ಅಗರ್ವಾಲ್(19), ವೀರೇಂದ್ರ ಸಿಂಗ್(22) ಎಂದು ಗುರುತಿಸಲಾಗಿದೆ.
ಸಚಿನ್ ಮತ್ತು ಹರ್ಷಿತ್ ಶಾಲಾ ಬಾಲಕಿಯ ಮೇಲೆ ಆಸಿಡ್ ಎರಚಲು ಮೋಟಾರ್ ಬೈಕ್ನಲ್ಲಿ ಬಂದಿದ್ದರು. ಇದೇ ವೇಳೆ ವೀರೇಂದ್ರ ಸಚಿನ್ ಅವರ ಸ್ಕೂಟರ್ ಮತ್ತು ಮೊಬೈಲ್ ಫೋನ್ ಅನ್ನು ಮತ್ತೊಂದು ಸ್ಥಳಕ್ಕೆ ಕೊಂಡೊಯ್ದು ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದಾನೆ.
ಇನ್ನೂ, ಆರೋಪಿಗಳು ಫ್ಲಿಪ್ಕಾರ್ಟ್ನಿಂದ ಆಸಿಡ್ ಅನ್ನು ಆರ್ಡರ್ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಾಗರ್ ಪ್ರೀತ್ ಹೂಡಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಚಿನ್ ಮತ್ತು ಶಾಲಾ ಬಾಲಕಿ ಒಬ್ಬರಿಗೊಬ್ಬರು ಪರಿಚಯಸ್ತರು. ಆದರೆ, ಸೆಪ್ಟೆಂಬರ್ನಲ್ಲಿ ಇಬ್ಬರ ನಡುವೆ ಮನಸ್ತಾಪವಾಯಿತು. ಇದರಿಂದ ಸಚಿನ್ ಆಸಿಡ್ ದಾಳಿಯ ಬಗ್ಗೆ ನಿರ್ಧರಿಸಿ ತಾಂತ್ರಿಕ ಪುರಾವೆಗಳ ಆಧಾರದ ಮೇಲೆ ಆರೋಪಿಗಳು ಫ್ಲಿಪ್ಕಾರ್ಟ್ನಿಂದ ಆಸಿಡ್ ಅನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
Rain in karnataka : ರಾಜ್ಯದಲ್ಲಿ ಇನ್ನೂ 4 ದಿನ ಚಳಿ, ಗಾಳಿ ಜೊತೆಗೆ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ
Rain in karnataka : ರಾಜ್ಯದಲ್ಲಿ ಇನ್ನೂ 4 ದಿನ ಚಳಿ, ಗಾಳಿ ಜೊತೆಗೆ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ