ನವದೆಹಲಿ : ವಿವಿಧ ಹೆದ್ದಾರಿಗಳಲ್ಲಿ ವಾಹನಗಳ ಹೊಸ ವೇಗದ ಮಿತಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಪೂರಕ ಪ್ರಶ್ನೆಗೆ ಗಡ್ಕರಿ ಅವರು ಈ ಮಾಹಿತಿ ನೀಡಿದರು. ಅಂತರಾಷ್ಟ್ರೀಯ ನಿಯಮಗಳ ಆಧಾರದ ಮೇಲೆ ಮತ್ತು ರಾಜ್ಯ ಸರ್ಕಾರಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು, ದ್ವಿಪಥ ಮತ್ತು ನಾಲ್ಕು ಪಥ ಸೇರಿದಂತೆ ವಿವಿಧ ಹೆದ್ದಾರಿಗಳಲ್ಲಿ ಹೊಸ ವೇಗದ ಮಿತಿಗಳನ್ನ ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಹೇಳಿದರು.
ಪ್ರತಿ ವರ್ಷ ಐದು ಲಕ್ಷ ಅಪಘಾತಗಳು ಸಂಭವಿಸುತ್ತಿದ್ದು, ರಸ್ತೆ ಅಪಘಾತಗಳಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ಅಪಘಾತಗಳಲ್ಲಿ ಸಾಯುವವರ ಸಂಖ್ಯೆ ಯಾವುದೇ ಸಾಂಕ್ರಾಮಿಕ, ಹೊಡೆದಾಟ, ಗಲಭೆಗಳಲ್ಲಿ ಸಾಯುವುದಿಲ್ಲ ಎಂದು ಹೇಳಿದರು. ಇಂತಹ ಘಟನೆಗಳ ನಿಯಂತ್ರಣಕ್ಕೆ ಸರ್ಕಾರ ನಿರಂತರವಾಗಿ ಕ್ರಮಕೈಗೊಳ್ಳುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಇತರ ಕ್ರಮಗಳ ಜೊತೆಗೆ ಸೆಲೆಬ್ರಿಟಿಗಳ ಸಹಕಾರವನ್ನೂ ತೆಗೆದುಕೊಳ್ಳಲಾಗುತ್ತಿದೆ ಎಂದು ಗಡ್ಕರಿ ಹೇಳಿದರು.
ಇನ್ನು ಇದೇ ವೇಳೆ ಸರ್ಕಾರ ಹೊಸ ಹೈಲೆವೆಲ್ ರಸ್ತೆಗಳನ್ನ ನಿರ್ಮಿಸುತ್ತಿದ್ದು ಇದರಿಂದ ಅನೇಕ ನಗರಗಳ ನಡುವಿನ ಅಂತರ ಕಡಿಮೆಯಾಗುತ್ತದೆ ಎಂದು ಹೇಳಿದರು. ಈ ಅನುಕ್ರಮದಲ್ಲಿ, ಈ ಹೊಸ ರಸ್ತೆಗಳ ನಿರ್ಮಾಣದ ನಂತ್ರ ದೆಹಲಿಯಿಂದ ಚಂಡೀಗಢಕ್ಕೆ ಇರುವ ದೂರವನ್ನ ಎರಡೂವರೆ ಗಂಟೆಗೆ ಇಳಿಸಲಾಗುವುದು ಎಂದು ಅವರು ಹೇಳಿದರು. ಜೈಪುರ, ಡೆಹ್ರಾಡೂನ್ ಮತ್ತು ಹರಿದ್ವಾರವನ್ನ ದೆಹಲಿಯಿಂದ ಎರಡು ಗಂಟೆಗಳಲ್ಲಿ ತಲುಪಬಹುದು.
JOB ALERT : ಉದ್ಯೋಗಾಂಕ್ಷಿಗಳಿಗೆ ಸಿಹಿಸುದ್ದಿ : ಡಿ.16, 20 ರಂದು ಕೊಡಗಿನಲ್ಲಿ ಉದ್ಯೋಗ ಮೇಳ ಆಯೋಜನೆ
ಸಿದ್ದರಾಮಯ್ಯ ನಾಟಿಕೋಳಿ-ರಾಗಿಮುದ್ದೆ ತಿನ್ನಲು ವರುಣಾಗೆ ಬರುತ್ತಿದ್ದಾರೆ : ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ