ಸಿನಿಮಾ ಡೆಸ್ಕ್ : ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ‘ಪಠಾನ್’ ಚಿತ್ರ ಇದೀಗ ಭಾರೀ ವಿವಾದ ಸೃಷ್ಟಿಸಿದೆ. ಕೇಸರಿ ಬಣ್ಣದ ಬಿಕಿನಿ ತೊಟ್ಟು ವಿವಾದ ಸೃಷ್ಟಿಸಿದ ದೀಪಿಕಾ ಪಡುಕೋಣೆ ಚಿತ್ರಕ್ಕೆ ಬ್ಯಾನ್ ಬಿಸಿ ತಟ್ಟಿದೆ.
ಈ ಸಿನಿಮಾದ ಹೊಸ ಹಾಡು ‘ಬೇಷರಂ ರಂಗ್’ ವಿವಾದಕ್ಕೆ ಸಿಲುಕಿದ್ದು, ಕೇಸರಿ ಬಣ್ಣದ ಬಟ್ಟೆ ತೊಟ್ಟು ಹಾಟ್ ಆಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದು, ಇದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಪಠಾನ್ ಚಿತ್ರದ ನಿರ್ಮಾಪಕರಿಗೆ ಹಾಡಿನ ದೃಶ್ಯಗಳು ಮತ್ತು ವೇಷಭೂಷಣಗಳನ್ನು ಬದಲಾಯಿಸುವಂತೆ ಹೇಳಿದ್ದಾರೆ.
ವೇಷಭೂಷಣಗಳು ಹೆಚ್ಚು ಆಕ್ಷೇಪಾರ್ಹವಾಗಿದ್ದು, ಈ ಹಾಡುಗಳ ದೃಶ್ಯಗಳು ಮತ್ತು ವೇಷಭೂಷಣಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ, ಮಧ್ಯಪ್ರದೇಶದಲ್ಲಿ ಚಿತ್ರ ಬಿಡುಗಡೆಗೆ ತಡೆ ಒಡ್ಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. #ಪಠಾಣ್ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ತುಕ್ಡೆ ತುಕ್ಡೆ ಗ್ಯಾಂಗ್ ಅನ್ನು ಬೆಂಬಲಿಸಿದ್ದಾರೆ, ವೇಷಭೂಷಣಗಳು ಹೆಚ್ಚು ಆಕ್ಷೇಪಾರ್ಹವಾಗಿದ್ದು, ಹಾಡನ್ನು ಕೊಳಕು ಮನಸ್ಥಿತಿಯೊಂದಿಗೆ ಚಿತ್ರೀಕರಿಸಲಾಗಿದೆ.
ಹಾಡುಗಳ ದೃಶ್ಯಗಳು ಮತ್ತು ವೇಷಭೂಷಣಗಳನ್ನು ಸರಿಪಡಿಸಬೇಕು, ಇಲ್ಲದಿದ್ದರೆ ಮಧ್ಯಪ್ರದೇಶದಲ್ಲಿ ಚಿತ್ರಕ್ಕೆ ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ಯೋಚಿಸಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
फिल्म #Pathan के गाने में टुकड़े-टुकड़े गैंग की समर्थक अभिनेत्री दीपिका पादुकोण की
वेशभूषा बेहद आपत्तिजनक है और गाना दूषित मानसिकता के साथ फिल्माया गया है।
गाने के दृश्यों व वेशभूषा को ठीक किया जाए अन्यथा फिल्म को मध्यप्रदेश में अनुमति दी जाए या नहीं दी जाए,यह विचारणीय होगा। pic.twitter.com/Ekl20ClY75— Dr Narottam Mishra (@drnarottammisra) December 14, 2022
BIGG NEWS : ಕೇಂದ್ರ ಇಲಾಖೆಗಳಲ್ಲಿ 9.79 ಲಕ್ಷ ಹುದ್ದೆಗಳು ಖಾಲಿ ಇವೆ ; ಸಚಿವ ಜಿತೇಂದ್ರ ಸಿಂಗ್ ಮಹತ್ವದ ಮಾಹಿತಿ