ಬೆಂಗಳೂರು: ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ 140 ಕಿಲೋಮೀಟರ್ ದೂರದಲ್ಲಿರುವ ಏಳಿಗೆ ಗ್ರಾಮದ ಗ್ರಾಮೀಣ ಸರ್ಕಾರಿ ಶಾಲೆಯೊಂದರಲ್ಲಿ ಸೀರೆಯು “ತೆರೆದ ಶೌಚಾಲಯ” ದ ಗೋಡೆಯಾಗಿ ಕಾರ್ಯನಿರ್ವಹಿಸುತ್ತಿರುವ ಘಟನೆ ನಡೆದಿದೆ.
ಶಾಲೆಯ ಆಟದ ಮೈದಾನದಲ್ಲಿ ಶೌಚಾಲಯವನ್ನು ಸ್ಥಾಪಿಸಲಾಗಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಎನ್ನುವುದು ಮರಿಚೀಕೆಯಾಗಿದೆ. ವರ್ಷಗಳ ಹಿಂದೆ, ಶಾಲೆಯ ಶೌಚಾಲಯ ಕಟ್ಟಡವು ಹಾನಿಗೊಳಗಾಗಿದ್ದು. ಇಲ್ಲಿಗೆ ಸರಿ ಏಳು ಹುಡುಗಿಯರು ಮತ್ತು ಆರು ಹುಡುಗರು ಆಗಮಿಸುತ್ತಾರೆ. ಇನ್ನೂಶಾಲೆಗೆ ಖಾಯಂ ಶಿಕ್ಷಕರಿಲ್ಲ, ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆಯಂತೆ.
ಈ ನಡುವೆ ಶಾಲೆಯ ಅವ್ಯವಸ್ಥೆಯ ಬಗ್ಗೆ ಫೋಟೋಗಳು ಮತ್ತು ವಿಡಿಯೋ ವೈರಲ್ ಆದ ನಂತರ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ, ಶಾಲೆಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
Visuals of deplorable condition of a govt school at #EligeHamlet in #Shivamogga has gone viral. Due to toilets in unusable condition. Students are forced to defecate in open using sarees as curtains on all four side. Children complain also of unhygienic drinking water.#Karnataka pic.twitter.com/yByHHJA6IG
— Hate Detector 🔍 (@HateDetectors) December 14, 2022