ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೆಲವು ಮಂದಿ ಚಾಲನೆಗಳನ್ನು ಮಾಡುವ ಸಮಯದಲ್ಲಿ ವಿಡಿಯೋಗಳನ್ನು ಮಾಡುತ್ತಿರುವುದು ಹೆಚ್ಚಾಗಿದ್ದು, ಇದು ಹಲವು ಸಾರಿ ಅಪಘಾತಕ್ಕೆ ಜೊತೆಗೆ ಕಾನೂನು ಮೀರಿದ ವರ್ತನೆಯಾಗಿ ಪರಿಣಾಮಿಸಿದೆ. ಹಲವು ಬಾರಿ ಇಂತಹ ಮಂದಿ ವಿರುದ್ದ ಪೋಲಿಸರು ಕಾನೂನು ಕ್ರಮ ಕೈಗೊಂಡಿದ್ದರು ಕೂಡ, ಹಲವು ಮಂದಿ ಇಂದಿಗೂ ಕಾನೂನಿಗೂ ಕ್ಯಾರೆ ಎನ್ನದೇ, ವಿಡಿಯೋಗಳನ್ನು ಮಾಡುತ್ತಿರುವುದನ್ನು ಕಾಣಬಹುದಾಗಿದೆ.
ಈ ನಡುವೆ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಚಾಲನೆ ಮಾಡುವ ಸಂದರ್ಭದಲ್ಲಿ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ನಿಮ್ಮ ಜೀವ ಅಥವಾ ಇತರರ ಜೀವಗಳನ್ನು ಅಪಾಯಕ್ಕೆ ತಳ್ಳಬೇಡಿ.
ನಿಮ್ಮ ಸಾಮಾಜಿಕ ಮಾಧ್ಯಮದ ಸಂದೇಶಗಳನ್ನು ಪರಿಶೀಲನೆ ಮಾಡುವ ಮುನ್ನ ನೆನಪಿಡಿ; ಇದು ಕಾನೂನು ಬಾಹಿರ, ಅಪಾಯಕಾರಿ ಮತ್ತು ನಿಮ್ಮನ್ನು ಬಂಧಿಸಲಾಗುತ್ತದೆ ಅಥವಾ ದಂಡ ವಿಧಿಸಲಾಗುತ್ತದೆ ಅಂಥ ಎಚ್ಚರಿಕೆ ನೀಡಿದೆ. ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಪ್ರಾಧಿಕಾರ ಈ ಮೂಲಕ ಕಿಡಿಗೇಡಿಗಳಿಗೆ ಎಚ್ಚರಿಕೆಯನ್ನು ಕೂಡ ರವಾನೆ ಮಾಡಿದೆ. ಆದರೆ ಈ ಬಗ್ಗೆ ಇಲ್ಲಿ ತನಕ ಗಮನಾರ್ಹವಾಗಿ ಯಾವುದೇ ಪ್ರಕರಣಗಳು ದಾಖಲೇ ಆಗದೇ ಇರುವುದು ಕೂಡ ನಾವು ಕಾಣಬಹುದಾಗಿದೆ. ಹೀಗೆ ಕಾನೂನು ಮೀರಿ ವಿಡಿಯೋಗಳನ್ನು ನಾವು ಪ್ರತಿ ನಿತ್ಯ ನೂರಾರು ಕಾಣಬಹುದಾಗಿದ್ದರು, ಕಾನೂನು ಮೀರಿದವರ ವಿರುದ್ದ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಈಗ ಪ್ರಶ್ನೆಯಾಗಿದೆ.