ಬೆಂಗಳೂರು: ಕಳೆದ ಎರಡು ವರ್ಷ ಕೊರೊನಾ ಸಮಸ್ಯೆಯಿಂದ ಹೊಸ ವರ್ಷಾಚರಣೆ ಬ್ರೇಕ್ ಬಿದ್ದಿತ್ತು. ಆದರೆ ಬಾರಿ ಕೊರೊನಾ ಕಡಿಮೆಯಾಗಿದ್ದರಿಂದ ಈ ಬಾರಿ ಆಚರಣೆಗೆ ಅವಕಾಶ ನೀಡಲಿದ್ದಾರೆ.
ಹೀಗಾಗಿ ಈ ಬಾರಿ ಮಧ್ಯರಾತ್ರಿ 3 ಗಂಟೆವರೆಗೂ ಹೋಟೆಲ್ ತೆರೆಯಲು ಅನುಮತಿ ಕೊಡಿ ಎಂದು ಪೊಲೀಸ್ ಇಲಾಖೆಗೆ ಹೋಟೆಲ್ ಮಾಲೀಕರ ಸಂಘ ಮನವಿ ಮಾಡಿದೆ.ಇನ್ನೇನು ಹೊಸ ವರ್ಷ ಹತ್ರ ಬರುತ್ತಿದೆ. ಕಳೆದ ಎರಡು ವರ್ಷದಿಂದ ಭರ್ಜರಿಯಾಗಿ ಆಚರಣೆ ಮಾಡಲು ಆಗಿರಲಿಲ್ಲ. ಈ ಬಾರಿ ಅದ್ದೂರಿಯಾಗಿ ಮಾಡಬೇಕೆಂದು ಸಿದ್ದತೆಗಳು ಶುರುವಾಗಿದೆ. ಕ್ರಿಸ್ಮಸ್, ಹೊಸ ವರ್ಷಕ್ಕೆ ಈಗಾಗಲೇ ಸಿದ್ಧತೆಗಳು ಶುರುವಾಗಿವೆ. ಮಾಲ್ಗಳಲ್ಲಿ ಕ್ರಿಸ್ಮಸ್ ಅಲಂಕಾರ ಜನರನ್ನು ಸೆಳೆಯುತ್ತಿವೆ.
ಮತ್ತೊಂದೆಡೆ ಕೊರೊನಾದಿಂದ ಕಂಗಾಲಾಗಿದ್ದ ಹೋಟೆಲ್ ಮಾಲೀಕರು ಹೊಸ ವರ್ಷಕ್ಕೆ ಹಣ ಮಾಡಿಕೊಳ್ಳುವ ಪ್ಲಾನ್ನಲ್ಲಿದ್ದಾರೆ.
2 ವರ್ಷದ ಬಳಿಕ ಅದ್ಧೂರಿಯಾಗಿ ಹೊಸ ವರ್ಷ ಆಚರಣೆಗೆ ಸಿದ್ಧತೆ ನಡೆಯುತ್ತಿದ್ದು ಮಧ್ಯರಾತ್ರಿ 3 ಗಂಟೆವರೆಗೂ ಹೋಟೆಲ್ ತೆರೆಯಲು ಅನುಮತಿ ಕೊಡಿ ಎಂದು ಪೊಲೀಸ್ ಇಲಾಖೆಗೆ ಹೋಟೆಲ್ ಮಾಲೀಕರ ಸಂಘ ಮನವಿ ಮಾಡಿದೆ.