ಬೆಂಗಳೂರು: ನಗರದಲ್ಲಿನ ಬಾರ್, ರೆಸ್ಟೋರೆಂಟ್ ಹಾಗೂ ಪಬ್ ಗಳ ಅವಧಿಯನ್ನು ಬೆಳಗಿನ ಜಾವ 3.30ರವರೆಗೆ ತೆರೆಯಲು ಅವಕಾಶ ನೀಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶಿಸಿದ್ದಾರೆ.
BIG NEW: ಬಿಹಾರದ ಛಾಪ್ರಾದಲ್ಲಿ ನಕಲಿ ಮದ್ಯ ಸೇವಿಸಿ ಆರು ಮಂದಿ ಸಾವು| Five died after consuming fake liquor
ಡಿಸೆಂಬರ್ 14ರ ಇಂದು ಮತ್ತು ಡಿಸೆಂಬರ್ 15ರ ನಾಳೆ ಮಾತ್ರವೇ ಫೀಪಾ ವಿಶ್ವಕಪ್ ಸೆಮಿ ಫೈನಲ್ ಪಂದ್ಯಾವಳಿಯ ಹಿನ್ನಲೆಯಲ್ಲಿ ಬಾರ್, ರೆಸ್ಟೋರೆಂಟ್ ಹಾಗೂ ಪಬ್ ಗಳನ್ನು ಬೆಳಗಿನ ಜಾವ 3.30ರವರೆಗೆ ತೆರೆಯಲು ಅನುಮತಿಸಿ ಆದೇಶಿಸಿದ್ದಾರೆ.
BIG NEW: ಬಿಹಾರದ ಛಾಪ್ರಾದಲ್ಲಿ ನಕಲಿ ಮದ್ಯ ಸೇವಿಸಿ ಆರು ಮಂದಿ ಸಾವು| Five died after consuming fake liquor
ಅಂದಹಾಗೇ ಫೀಪಾ ವಿಶ್ವಕಪ್ ಸೆಮಿ ಫೈನಲ್ ಪಂದ್ಯಾವಳಿಯ ಹಿನ್ನಲೆಯಲ್ಲಿ ಬಾರ್, ರೆಸ್ಟೋರೆಂಟ್ ಹಾಗೂ ಪಬ್ ಗಳನ್ನು ಓಪನ್ ಮಾಡುವಂತ ಕಾಲಾವಧಿ ವಿಸ್ತರಿಸುವಂತೆ ಸಂಘವು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿತ್ತು. ಈ ಮನವಿಯ ಹಿನ್ನಲೆಯಲ್ಲಿ ಇದೀಗ ಇಂದು ಮತ್ತು ನಾಳೆ ಬೆಳಗಿನ ಜಾವ 3.30ರವರೆಗೆ ತೆರೆಯಲು ಅವಕಾಶ ನೀಡಿದ್ದಾರೆ.