ಕೊಪ್ಪಳ: ಇತ್ತೀಚೆಗೆ ಗಾಲಿ ಜನಾರ್ಧನ ರೆಡ್ಡಿ ಒಂದಲ್ಲ ಒಂದು ಸುದ್ದಿಯಲ್ಲಿ ಇದ್ದಾರೆ. ಇದೀಗ ಮುಂಬರುವ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೊಸ ಪಕ್ಷವನ್ನು ಹುಟ್ಟುಹಾಕಲು ರೆಡಿದ್ದಾರೆ. ಈ ನಡುವೆಯೇ ಮತ್ತೊಂದು ಸಂಭ್ರಮದಲ್ಲಿದ್ದಾರೆ.
ಗಾಲಿ ಜನಾರ್ಧನ ರೆಡ್ಡಿ ಅವರ ಹೊಸ ಮನೆಯ ಗೃಹ ಪ್ರವೇಶ ಇಂದು ಭರ್ಜರಿಯಾಗಿಯೇ ನಡೆಯುತ್ತಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿ ರಸ್ತೆಯಲ್ಲಿ ಜನಾರ್ಧನ ರೆಡ್ಡಿ ಮನೆ ಖರೀದಿಮಾಡಿದ್ದು, ಅದರ ಗೃಹಪ್ರವೇಶವನ್ನು ಇಂದು ಆಚರಿಸುತ್ತಿದ್ದಾರೆ. ಜನಾರ್ಧನ ರೆಡ್ಡಿ ಪತ್ನಿ ಅರುಣಾಲಕ್ಷ್ಮೀ ಅವರಿಂದ ಗೃಹಪ್ರವೇಶ ಪೂಜೆ ನೆರೆವೇರಿದೆ. ಇನ್ನು ಗೃಹಪ್ರವೇಶಕ್ಕೆ ಅವರ ಆಪ್ತ ವಲಯಕ್ಕೆ ಆಹ್ವಾನ ಮಾಡಿದ್ದಾರೆ.