ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಚೀನಾ ಸೈನಿಕರು ಭಾರತದ ಭೂಪ್ರದೇಶವನ್ನು ಅತಿಕ್ರಮಣ ಮಾಡಲು ಯತ್ನಿಸಿದ ಬಗ್ಗೆ ಗರಂ ಆಗಿರುವ ಆ ರಾಜ್ಯದ ಮುಖ್ಯಮಂತ್ರಿ ಪೆಮಾ ಖಂಡು(Pema Khandu) ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ತವಾಂಗ್ನ ಎಲ್ಎಸಿ ಬಳಿ ಭಾರತೀಯ ಸೈನಿಕರು ಚೀನಾ ಸೈನಿಕರ ಅತಿಕ್ರಮಣವನ್ನು ವಿಫಲಗೊಳಿಸಿದ್ದು, ಘರ್ಷಣೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಲೋಕಸಭೆಗೆ ವಿವರಿಸಿದರು.ʻಚೀನಾ ಸೈನಿಕರ ಅತಿಕ್ರಮಣವನ್ನು ಭಾರತೀಯ ಪಡೆಗಳು ಹಿಮ್ಮೆಟ್ಟಿಸಿವೆ. ನಮ್ಮ ಸೈನಿಕರಿಗೆ ಯಾವುದೇ ಪ್ರಾಣಹಾನಿ ಅಥವಾ ಯಾವುದೇ ಗಂಭೀರ ಗಾಯವಾಗಿಲ್ಲ. ಚೀನಾದ ಕಡೆಯಿಂದ ಇಂತಹ ಕ್ರಮಗಳಿಂದ ದೂರವಿರಲು, ಗಡಿಯಲ್ಲಿ ಶಾಂತಿ, ನೆಮ್ಮದಿ ಕಾಪಾಡುವಂತೆ ಕೇಳಿಕೊಳ್ಳಲಾಗಿದೆʼ ಎಂದು ರಾಜನಾಥ್ ಸಿಂಗ್ ಹೇಳಿದರು.
ವಾಸ್ತವಿಕ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಲು ಪ್ರಯತ್ನಿಸುವ ಯಾರಿಗಾದರೂ ಭಾರತದ ಸೈನಿಕರು ತಕ್ಕ ಪ್ರತ್ಯುತ್ತರ ನೀಡುತ್ತಾರೆ ಎಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಹೇಳಿದ್ದಾರೆ. 1962ರ ಯುದ್ಧದಲ್ಲಿ ಚೀನಾ ಸೇನೆಯು ಭಾರತದ ಮೇಲೆ ದಾಳಿ ನಡೆಸಿದ್ದನ್ನು ನೆನಪಿಸಿಕೊಂಡ ಅವರು, ಯಾರಾದರೂ ಅತಿಕ್ರಮಣ ಮಾಡಲು ಪ್ರಯತ್ನಿಸಿದರೆ, ಭಾರತೀಯ ಸೈನಿಕರು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. 1962 ರಲ್ಲಿ, ಚೀನಾ ಲಡಾಖ್ನಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿತು ಮತ್ತು ಅಂದಿನ ಈಶಾನ್ಯ ಫ್ರಾಂಟಿಯರ್ ಏಜೆನ್ಸಿಯಲ್ಲಿ ಮೆಕ್ಮೋಹನ್ ರೇಖೆಯನ್ನು ದಾಟಿತ್ತು.
WATCH VIDEO: ಅಜ್ಜಿ ಹೋದಲ್ಲೆಲ್ಲಾ ಆಕೆಯನ್ನೇ ಹಿಂಬಾಲಿಸಿದ ʻಪೆಂಗ್ವಿನ್ʼ!… ಹೃದಯಸ್ಪರ್ಶಿ ವಿಡಿಯೋ ವೈರಲ್
SHOCKING NEWS: ತನ್ನ ನವಜಾತ ಶಿಶುವನ್ನು ಕಟ್ಟಡದಿಂದ ಎಸೆದು ಕೊಂದ 15 ವರ್ಷದ ಬಾಲಕಿ, ಸಾಕ್ಷ್ಯ ನಾಶಪಡಿಸಲು ಈ ಕೃತ್ಯ
WATCH VIDEO: ಅಜ್ಜಿ ಹೋದಲ್ಲೆಲ್ಲಾ ಆಕೆಯನ್ನೇ ಹಿಂಬಾಲಿಸಿದ ʻಪೆಂಗ್ವಿನ್ʼ!… ಹೃದಯಸ್ಪರ್ಶಿ ವಿಡಿಯೋ ವೈರಲ್
SHOCKING NEWS: ತನ್ನ ನವಜಾತ ಶಿಶುವನ್ನು ಕಟ್ಟಡದಿಂದ ಎಸೆದು ಕೊಂದ 15 ವರ್ಷದ ಬಾಲಕಿ, ಸಾಕ್ಷ್ಯ ನಾಶಪಡಿಸಲು ಈ ಕೃತ್ಯ