ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇತ್ತೀಚೆಗೆ ಕರೆನ್ಸಿ ನೋಟುಗಳ ಮೇಲೆ ಲಕ್ಷ್ಮಿ-ಗಣೇಶ್ ಚಿತ್ರವನ್ನ ಮುದ್ರಿಸಲು ಒತ್ತಾಯಿಸಿದ್ದರು. ಈ ಬೇಡಿಕೆಗೆ ಸರ್ಕಾರದ ಉತ್ತರ ಸಂಸತ್ತಿನಲ್ಲಿ ಮುನ್ನೆಲೆಗೆ ಬಂದಿದೆ. ಭಾರತೀಯ ಕರೆನ್ಸಿ ನೋಟುಗಳಲ್ಲಿ ಗಣ್ಯ ವ್ಯಕ್ತಿಗಳು, ದೇವರು ಮತ್ತು ದೇವತೆಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಂದ ಹಿಡಿದು ಪ್ರಾಣಿಗಳ ಚಿತ್ರಗಳನ್ನ ಮುದ್ರಿಸಲು ವಿನಂತಿಗಳನ್ನ ಸ್ವೀಕರಿಸಲಾಗಿದೆ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿದೆ. ಅದೇ ಸಮಯದಲ್ಲಿ, ಕರೆನ್ಸಿ ನೋಟುಗಳಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಚಿತ್ರವನ್ನ ತೆಗೆದುಹಾಕುವ ಯಾವುದೇ ಯೋಜನೆ ಸರ್ಕಾರ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಕರೆನ್ಸಿ ನೋಟುಗಳಲ್ಲಿ ಲಕ್ಷ್ಮಿ – ಗಣೇಶ ಫೋಟೋಗೆ ಬೇಡಿಕೆ!
ಲೋಕಸಭೆಯಲ್ಲಿ, ಭಾರತೀಯ ಕರೆನ್ಸಿ ನೋಟುಗಳಲ್ಲಿ ಲಕ್ಷ್ಮಿದೇವಿ ಮತ್ತು ಗಣೇಶನ ಫೋಟೋಗಳನ್ನ ಒಳಗೊಂಡಂತೆ ಹೆಚ್ಚಿನ ಫೋಟೋಗಳನ್ನ ಹಾಕುವ ಬೇಡಿಕೆಯ ಬಗ್ಗೆ ವಿನಂತಿ ಮಾಡಲಾಗಿದೆಯೇ.? ಎಂದು ಸರ್ಕಾರವನ್ನ ಕೇಳಲಾಯಿತು. ಹೀಗಿರುವಾಗ ಈ ಬೇಡಿಕೆಗೆ ಸಂಬಂಧಿಸಿದಂತೆ ಸರಕಾರದ ಯೋಜನೆ ಏನು.? ಈ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, “ಸರ್ಕಾರಕ್ಕೆ ಮನವಿ ಮಾಡುವ ಮೂಲಕ ಈ ಬೇಡಿಕೆ ಇಡಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಿಂದ ಹಿಡಿದು, ಗಣ್ಯ ವ್ಯಕ್ತಿಗಳು, ದೇವರು ಮತ್ತು ದೇವತೆಗಳು ಮತ್ತು ಪ್ರಾಣಿಗಳ ಚಿತ್ರಗಳನ್ನು ಕರೆನ್ಸಿ ನೋಟುಗಳಲ್ಲಿ ಮುದ್ರಿಸಲು ಬೇಡಿಕೆಯಿದೆ ಎಂದು ಅವರು ಹೇಳಿದರು. ಆರ್ಬಿಐ ಕಾಯಿದೆ 1934 ರ ಸೆಕ್ಷನ್ 25ರ ಅಡಿಯಲ್ಲಿ, ಬ್ಯಾಂಕ್ ನೋಟು ವಿನ್ಯಾಸ, ರೂಪ ಮತ್ತು ವಸ್ತುಗಳ ಬಳಕೆಗೆ ಸಂಬಂಧಿಸಿದಂತೆ ಆರ್ಬಿಐನ ಕೇಂದ್ರೀಯ ನಿರ್ದೇಶಕರ ಮಂಡಳಿಯ ಶಿಫಾರಸಿನ ನಂತರ ಸರ್ಕಾರದಿಂದ ಅನುಮೋದನೆ ಪಡೆಯಬೇಕು, ಅದರ ನಂತರವೇ ಬದಲಾವಣೆ ಸಾಧ್ಯ ಎಂದು ಅವರು ಹೇಳಿದರು.
RBI clarifies: No change in existing Currency and Banknoteshttps://t.co/OmjaKDEuat
— ReserveBankOfIndia (@RBI) June 6, 2022
ಕರೆನ್ಸಿ ನೋಟುಗಳಿಂದ ರಾಷ್ಟ್ರಪಿತನ ಚಿತ್ರ ತೆಗೆಯುವ ಬಗ್ಗೆ ಸ್ಪಷ್ಟನೆ
ಭಾರತದ ಕರೆನ್ಸಿ ನೋಟುಗಳಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಫೋಟೋ ತೆಗೆಯುವ ಯೋಜನೆಯನ್ನ ಪರಿಗಣಿಸಲಾಗುತ್ತಿದೆಯೇ ಎಂದು ಸರ್ಕಾರವನ್ನ ಕೇಳಲಾಯಿತು. ರಾಜ್ಯ ಹಣಕಾಸು ಸಚಿವರು ಇದನ್ನ ಸಾರಾಸಗಟಾಗಿ ನಿರಾಕರಿಸಿ, ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.
ಚಿತ್ರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಬಂದ ಸಲಹೆಗಳು
ಕರೆನ್ಸಿ ನೋಟುಗಳ ಮೇಲಿನ ಚಿತ್ರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಹಲವು ಮನವಿಗಳು ಮತ್ತು ಸಲಹೆಗಳು ಬಂದಿವೆ ಎಂದು ಅವರು ಹೇಳಿದರು. ಜೂನ್ 6, 2022 ರಂದು ಆರ್ಬಿಐ ಪತ್ರಿಕಾ ಪ್ರಕಟಣೆಯನ್ನ ಬಿಡುಗಡೆ ಮಾಡಿದೆ ಮತ್ತು ಪ್ರಸ್ತುತ ಕರೆನ್ಸಿ ನೋಟುಗಳನ್ನ ಬದಲಾಯಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಪಂಕಜ್ ಚೌಧರಿ ಹೇಳಿದರು. ಗಮನಾರ್ಹವಾಗಿ, ಆಗ RBI ಅಸ್ತಿತ್ವದಲ್ಲಿರುವ ಕರೆನ್ಸಿ ನೋಟುಗಳು ಮತ್ತು ಬ್ಯಾಂಕ್ ನೋಟುಗಳಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಚಿತ್ರವನ್ನು ತೆಗೆದುಹಾಕುವ ವದಂತಿಗಳನ್ನ ತಳ್ಳಿಹಾಕಬೇಕಾಯಿತು.
BIGG NEWS: ಬೆಂಗಳೂರಿನಲ್ಲಿ ಚಿಕನ್ ರೋಲ್ ಕೊಡದಿದ್ದಕ್ಕೆ ಹೋಟೆಲ್ ರೂಮಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು
ಉದ್ಯೋಗಿಗಳೇ ಎಚ್ಚರ ; ನೀವಿದನ್ನ ಮಾಡದಿದ್ರೆ ‘PF ಖಾತೆ’ಯಿಂದ ಹಣ ಹಿಂಪಡೆಯೋಕೆ ಸಾಧ್ಯವಾಗೋಲ್ಲ