ಚೀನಾ : ಘರ್ಷಣೆಯ ವರದಿಗಳ ನಂತರ ಭಾರತದ ಗಡಿಯಲ್ಲಿ(India border) ಪರಿಸ್ಥಿತಿ ಸ್ಥಿರವಾಗಿದೆ ಎಂದು ಚೀನಾ(China) ಹೇಳಿದೆ ಎಂದು ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ.
ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ತವಾನ್ ಸೆಕ್ಟರ್ನಲ್ಲಿ ಭಾರತ ಮತ್ತು ಚೀನಾದ ಸೈನಿಕರು(India-China Border Clash) ಮುಖಾಮುಖಿಯಾಗಿದ ಬಳಿಕ ಇದು ಚೀನಾದ ಮೊದಲ ಪ್ರತಿಕ್ರಿಯೆಯಾಗಿದೆ.
ನಾವು ಅರ್ಥಮಾಡಿಕೊಂಡಂತೆ, ಚೀನಾ-ಭಾರತದ ಗಡಿ ಪರಿಸ್ಥಿತಿಯು ಒಟ್ಟಾರೆ ಸ್ಥಿರವಾಗಿದೆ.ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಗಡಿ ಸಮಸ್ಯೆಯ ಬಗ್ಗೆ ಎರಡೂ ಕಡೆಯವರು ಅಡೆತಡೆಯಿಲ್ಲದ ಸಂಭಾಷಣೆಯನ್ನು ನಡೆಸುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ (Wang Wenbin) ಹೇಳಿದ್ದಾರೆ.
ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನಲ್ಲಿ ನೈಜ ನಿಯಂತ್ರಣ ರೇಖೆ (LAC) ಉದ್ದಕ್ಕೂ ಭಾರತ ಮತ್ತು ಚೀನಾದ ಸೈನಿಕರು ಘರ್ಷಣೆ ನಡೆದಿತ್ತು. ಘಟನೆಯಲ್ಲಿ ಎರಡು ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದ ಬಗ್ಗೆ ವರದಿಯಾಗಿತ್ತು.
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನಲ್ಲಿ 200 ಕ್ಕೂ ಹೆಚ್ಚು ಚೀನೀ ಸೈನಿಕರು ಮೊನಚಾದ ದೊಣ್ಣೆಗಳು ಮತ್ತು ಕೋಲುಗಳನ್ನು ಹೊತ್ತ ಭಾರತೀಯ ಸೈನಿಕರೊಂದಿಗೆ ಘರ್ಷಣೆ ನಡೆಸಿದರು ಎಂದು ಮೂಲವೊಂದು ತಿಳಿಸಿದೆ.
BIGG NEWS : ನಾಳೆಯಿಂದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ
WATCH VIDEO: ಮಹಿಳೆ ಕಿವಿಯೊಳಗಿಂದ ಮೆಲ್ಲನೆ ನಡೆದುಬಂದ ʻಜೇಡʼ… ಮೈಜುಮ್ಮೆನಿಸುವ ವಿಡಿಯೋ ವೈರಲ್
ಶಿವಮೊಗ್ಗ: ಕೈಹಾಕಿದ ಕೆಲಸದಲ್ಲಿ ವಿಶ್ವಾಸವಿದ್ದರೆ ಯಶಸ್ಸು ಸಾಧ್ಯ – ಕೆ.ಎಸ್.ಈಶ್ವರಪ್ಪ