ಬೆಂಗಳೂರು : 2018 ರಲ್ಲಿ ನಡೆದ ದುನಿಯಾ ವಿಜಯ್ ಕೇಸ್ ಮರುಜೀವ ಬಂದಿದ್ದದು, ಪ್ರಕರಣ ಸಂಬಂಧ ಪಾನಿಪುರಿ ಕಿಟ್ಟಿ ವಿರುದ್ಧ ನಟ ದುನಿಯಾ ವಿಜಯ್ ನೀಡಿದ್ದ ದೂರಿನಡಿ ಎಫ್ ಐಆರ್ ದಾಖಲಾಗಿದೆ.
BIGG NEWS : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ : ರಾತ್ರೋರಾತ್ರಿ ಬೆಳಗಾವಿಗೆ ಭೇಟಿ ನೀಡಿದ `NCP’ ಶಾಸಕ ರೋಹಿತ್ ಪವಾರ್
2018 ರಲ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧ ಕಿಡ್ನಾಪ್ ಕೇಸ್ ನಲ್ಲಿ ಆರೋಪಿಯಾಗಿದ್ದ ದುನಿಯಾ ವಿಜಯ್ ಪ್ರತಿ ದೂರು ನೀಡಿದ್ದರು. ಕಾರಿಗೆ ಹಾನಿ, ಜೀವ ಬೆದರಿಕೆ ಬಗ್ಗೆ ದುನಿಯಾ ವಿಜಯ್ ಪ್ರತಿದೂರು ನೀಡಿದ್ದರು. ಪಾನಿಪುರಿ ಕಿಟ್ಟಿ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದು ಪಡಿಸಿತ್ತು.
ಇದೀಗ ಪಾನಿಪುರಿ ಕಿಟ್ಟಿ ವಿರುದ್ಧ ಎಫ್ ಐಆರ್ ದಾಖಲಿಸಲು ಹೈಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪಾನಿಪುರಿ ಕಿಟ್ಟಿ, ಮಾರುತಿಗೌಡ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
2018ರಲ್ಲಿ ದುನಿಯಾ ವಿಜಿ ವಿರುದ್ಧ ಕೊಲೆಯತ್ನ ಕೇಸ್ ದಾಖಲಾಗಿತ್ತು, ದುನಿಯಾ ವಿಜಯ್ ಕೊಟ್ಟಿದ್ದ ದೂರನ್ನ ಪೊಲೀಸರು NCR ಮಾಡಿದ್ದರು, ಈ ಸಂಬಂಧ ವಿಜಿ ಕೋರ್ಟ್ಗೆ ಖಾಸಗಿ ದೂರು ನೀಡಿದ್ದರು, ನಟ ದುನಿಯಾ ವಿಜಯ್ ಕೋರ್ಟ್ ಮೂಲಕ FIR ಮಾಡಿಸಿದ್ದು, ವಿಜಯ್ ನೀಡಿದ ದೂರಿನ ಮೇರೆಗೆ IPC-427, 506, 34ರಡಿ FIR ಹಾಕಲಾಗಿದೆ.