ಉತ್ತರಪ್ರದೇಶ: ಮಗು ಹುಟ್ಟುವ ಮೊದಲೇ ಅದನ್ನು ಮಾರಾಟ ಮಾಡುವ ಒಪ್ಪಂದ ಮಾಡಿಕೊಂಡು, ಮೆಡಿಕಲ್ ಕಾಲೇಜಿನಿಂದ ಮಗು ಕಳುವಾಗಿದೆಂದು ಕೋಲಾಹಲ ಸೃಷ್ಟಿಸಿದ ತಂದೆಯ ನೀಚ ಕೃತ್ಯ ಬೆಳಕಿಗೆ ಬಂದಿದೆ
BIGG NEWS : ‘ಚುನಾವಣೆಯಲ್ಲಿ ಯಾರು ನನ್ನ ಸಹಾಯಕ್ಕೆ ಬರಲಿಲ್ಲ’ : ಜೆಡಿಎಸ್ ಶಾಸಕರ ವಿರುದ್ದ ಅಪ್ಪಾಜಿ ಗೌಡ ಅಸಮಾಧಾನ
ಉತ್ತರಪ್ರದೇಶದ ಲಾಲಾ ಲಜಪತ್ ರಾಯ್ ವೈದ್ಯಕೀಯ ಕಾಲೇಜಿನ ಹೆರಿಗೆ ವಾರ್ಡ್ನಲ್ಲಿ ತಡರಾತ್ರಿ ಮಹಿಳೆಗೆ ಹೆರಿಗೆಯಾಗಿದೆ. ಆದರೆ, ಮಗು ಹುಟ್ಟಿದ ಕೆಲವೇ ಗಂಟೆಗಳಲ್ಲಿ ತಂದೆಯೇ ಮಗುವನ್ನು ಬೇರೊಬ್ಬ ದಂಪತಿಗೆ ಬರೊಬ್ಬರಿ 1 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ
BIGG NEWS : ‘ಚುನಾವಣೆಯಲ್ಲಿ ಯಾರು ನನ್ನ ಸಹಾಯಕ್ಕೆ ಬರಲಿಲ್ಲ’ : ಜೆಡಿಎಸ್ ಶಾಸಕರ ವಿರುದ್ದ ಅಪ್ಪಾಜಿ ಗೌಡ ಅಸಮಾಧಾನ
ಈ ಮಧ್ಯೆ ವೈದ್ಯಕೀಯ ಕಾಲೇಜಿನಲ್ಲಿ ಮಗುವಿನ ಕಳ್ಳತನವಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಸ್ಥಳಕ್ಕೆ ಪೊಲೀಸರು ಬಂದಿದ್ದರು. ಪೊಲೀಸರು ಸರಿಯಾಗಿ ವಿಚಾರಿಸಿದಾಗ ಮಗುವನ್ನು ಮಾರಾಟ ಮಾಡಿದ ತಂದೆಯ ಕೃತ್ಯ ಬಯಲಿಗೆ ಬಂದಿದೆ. ಆತನ ಬಳಿ 82 ಸಾವಿರ ರೂಪಾಯಿ ಹಣ ಕೂಡ ಪತ್ತೆಯಾಗಿದೆ.
BIGG NEWS : ‘ಚುನಾವಣೆಯಲ್ಲಿ ಯಾರು ನನ್ನ ಸಹಾಯಕ್ಕೆ ಬರಲಿಲ್ಲ’ : ಜೆಡಿಎಸ್ ಶಾಸಕರ ವಿರುದ್ದ ಅಪ್ಪಾಜಿ ಗೌಡ ಅಸಮಾಧಾನ
ಮಗುವಿನ ತಾಯಿಯ ಪ್ರಕಾರ, ಮಗು ಹುಟ್ಟುವ ಮೊದಲೇ ಅದನ್ನು ಮಾರಾಟ ಮಾಡುವ ಒಪ್ಪಂದವಾಗಿತ್ತಂತೆ. ಶಿಶು ಗಂಡಾಗಿದ್ದರೆ 1 ಲಕ್ಷ ರೂಪಾಯಿಗೆ ಮಾರಾಟದ ಒಪ್ಪಂದವಾಗಿದ್ದು, ಇದಕ್ಕೆ ತಾಯಿಯೂ ಒಪ್ಪಿದ್ದಳು. ಇದರ ಪ್ರಕಾರವೇ ಎಲ್ಲವೂ ನಡೆದಿತ್ತು. ಆದರೆ ಮಗುವಿನ ಕಳುವಾಗಿದೆ ಎಂಬ ಆರೋಪ ಕೇಳಿ ಬಂದ ನಂತರ ಮಗು ಮಾರಾಟ ಕೃತ್ಯ ಬಯಲಾಗಿದೆ. ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಕ್ರಿಮಿನಲ್ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ತಂದೆಯ ನೀಚ ಕೃತ್ಯ ಬಹಿರಂಗವಾಗಿದೆ
BIGG NEWS : ‘ಚುನಾವಣೆಯಲ್ಲಿ ಯಾರು ನನ್ನ ಸಹಾಯಕ್ಕೆ ಬರಲಿಲ್ಲ’ : ಜೆಡಿಎಸ್ ಶಾಸಕರ ವಿರುದ್ದ ಅಪ್ಪಾಜಿ ಗೌಡ ಅಸಮಾಧಾನ