ಮಂಡ್ಯ : ಕಳೆದ ಚುನಾವಣೆಯಲ್ಲಿ ಯಾರು ನನ್ನ ಸಹಾಯಕ್ಕೆ ಬರಲಿಲ್ಲ ಎಂದು ಜೆಡಿಎಸ್ ಶಾಸಕರ ವಿರುದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಅಪ್ಪಾಜಿ ಗೌಡ ಅಸಮಾಧಾನ ಹೊರಹಾಕಿದ್ದಾರೆ.
ಕಳೆದ ಪರಿಷತ್ತ್ ಚುನಾವಣೆಯಲ್ಲಿ ಸೋಲು ಕಂಡಿದ್ದ ಅಪ್ಪಾಜಿ ಗೌಡ ಇದೀಗ ಜೆಡಿಎಸ್ ಶಾಸಕರ ವಿರುದ್ದ ಅಪ್ಪಾಜಿ ಗೌಡ ಅಸಮಾಧಾನ ಹೊರಹಾಕಿದ್ದಾರೆ.
ನನ್ನ ಚುನಾವಣೆಯಲ್ಲಿ ಕ್ಷೇತ್ರದ ಯಾವ ನಾಯಕರು ಸಹಾಯ ಮಾಡಿಲ್ಲ.ಶಾಸಕ ಸುರೇಶ್ ಗೌಡರಿಂದ ನಾನು ಯಾವುದೇ ಸಹಾಯ ಪಡೆದಿಲ್ಲ.ಶಾಸಕ ಸುರೇಶ್ ಗೌಡರ ಚುನಾವಣೆಯಲ್ಲಿ ನಾನು ಆರ್ಥಿಕವಾಗಿ ಸಹಾಯ ಮಾಡಿದ್ದೆ.ಕೋಟಿ ಕೋಟಿ ಹಣ ಕೊಟ್ಟು ಸಹಾಯ ಮಾಡಿದ್ದೆ.ನನ್ನ ಚುನಾವಣೆಯಲ್ಲಿ ಸುರೇಶ್ಗೌಡ ಅಥವಾ ಶಿವರಾಮೇಗೌಡ ಯಾವುದೇ ಸಹಾಯ ಮಾಡಿಲ್ಲ.ರಾಜಕೀಯ ಅನುಭವದ ಕೊರೆಯಿಂದ ಮುಂದಾಳತ್ವ ವಹಿಸಿ ತೊಂದರೆಗೆ ಸಿಕ್ಕಿದ್ದೇನೆ ಎಂದರು.
‘ಫೈಟರ್ ರವಿ ಹತ್ತಿರ ಆರ್ಥಿಕ ಸಹಾಯ ಪಡೆದಿದ್ದು ನಿಜ .ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಸುರೇಶ್ ಗೌಡರಿಗೆ ದುಡ್ಡು ಕೊಡ್ಸಿದ್ದು ನಿಜ.ಇದು ಗುಟ್ಟಾಗಿರಬೇಕೆಂದು ನಾನು ಎಲ್ಲು ಹೇಳಿರಲಿಲ್ಲ.ನಾನು ಪಕ್ಷ ನಿಷ್ಟೆಗೆ ಬದ್ದನಾಗಿದ್ದೇನೆ.ದೇವೇಗೌಡ್ರು, ಕುಮಾರಣ್ಣರವರ ಬದ್ದತೆಗೆ ನಾನು ಕೆಲಸ ಮಾಡ್ತಿದ್ದೇನೆನಾನು ಎಲ್ಲು ಸಹ ಪಕ್ಷದ ವಿರುದ್ದ, ಅಸಮಾಧಾನ ವ್ಯಕ್ತಪಡಿಸಿಲ್ಲ.ಸುರೇಶ್ ಗೌಡ ರಿಂದ ಯಾವ ಸಹಾಯವನ್ನು ಇದುವರೆಗೂ ಪಡೆದಿಲ್ಲ ಎಂದು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.ಮಂಡ್ಯ ಜಿಲ್ಲೆ ನಾಗಮಂಗಲದ ಖಾಸಗಿ ಸಮುದಾಯ ಭವನದಲ್ಲಿ ಪಂಚರತ್ನ ರಥಯಾತ್ರೆ ಸಂಬಂಧ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅಪ್ಪಾಜಿ ಗೌಡ ಅಸಮಾಧಾನ ಹೊರಹಾಕಿದ್ದಾರೆ.
BIGG NEWS : ಹಾಸನದಲ್ಲಿ ಅಪ್ರಾಪ್ತ13 ವರ್ಷದ ಬಾಲಕಿ ಗರ್ಭಿಣಿ : ಅತ್ಯಾಚಾರ ಎಸಗಿದ್ದ ಮೂವರು ಕಾಮುಕರ ಬಂಧನ