ಬೆಂಗಳೂರು : ಬೆಂಗಳೂರಿನ ವಾಹನ ಸವಾರರೇ ಎಚ್ಚರ..ಬೇಕಾಬಿಟ್ಟಿ ವಾಹನ ನಿಲ್ಲಿಸಿದ್ರೆ ನಿಮ್ಮ ವೆಹಿಕಲ್ ನ್ನು ಟೋಯಿಂಗ್ ವಾಹನ ಎತ್ತಿಹಾಕಿಕೊಂಡು ಹೋಗಲಿದೆ. ಹೌದು, ಇಷ್ಟು ದಿನ ಟ್ರಾಫಿಕ್ ಪೊಲೀಸರು ನಿಲ್ಲಿಸಿದ್ದ ಟೋಯಿಂಗ್ ವಾಹನವನ್ನು ಬಿಬಿಎಂಪಿ ಕೈ ಎತ್ತಿಕೊಳ್ಳಲಿದೆ.
ಕೆಲವು ತಿಂಗಳ ಹಿಂದೆ ಟೋಯಿಂಗ್ ವ್ಯವಸ್ಥೆಗೆ ಜನರು ಭಾರೀ ಆಕ್ರೋಶ ಹೊರ ಹಾಕಿದ್ದರು. ವಸ್ತುಗಳನ್ನು ಡೆಲಿವರಿ ಮಾಡಲು ಬಂದಿದ್ದ ಯುವಕ ತನ್ನ ದ್ವಿಚಕ್ರ ವಾಹನ ನಿಲ್ಲಿಸಿದ್ದಾಗ ಅದನ್ನು ಎತ್ತಿಕೊಂಡು ಹೋಗಲಾಗಿತ್ತು. ಈ ವೇಳೆ ತನ್ನ ವಾಹನ ಬಿಡಿಸಿಕೊಳ್ಳಲು ಟೋಯಿಂಗ್ ವಾಹನದ ಹಿಂದೆ ಓಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಸಂಚಾರ ಪೊಲೀಸರು ಹಾಗೂ ಟೋಯಿಂಗ್ ವಾಹನ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಟೋಯಿಂಗ್ ಇಲ್ಲ ಅಂತ ಸವಾರರು ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ವಾಹನ ಮಾಲೀಕರು ಬಂದ ಬಳಿಕ ಸ್ಥಳದಲ್ಲೇ ದಂಡ ವಸೂಲಿ ಮಾಡಿ ವಾಹನ ಬಿಟ್ಟುಕಳಿಸಲಾಗುತ್ತಿತ್ತು.
ಇದೀಗ ಮತ್ತೆ ಬೆಂಗಳೂರಿನಲ್ಲಿ ಟೋಯಿಂಗ್ ವ್ಯವಸ್ಥೆ ಬರಲಿದ್ದು, ಬಿಬಿಎಂಪಿ ಸಂಪೂರ್ಣವಾಗಿ ಖಾಸಗಿ ಎಜೆನ್ಸಿ ಮೂಲಕ ಟೋಯಿಂಗ್ ಮಾಡಿಸಲು ಮುಂದಾಗಿದ್ದು, ಬಿಬಿಎಂಪಿ ನಿರ್ಧಾರಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ರಾಫಿಕ್ ಪೊಲೀಸರು ಬೇಕಾಬಿಟ್ಟಿ ಟೋಯಿಂಗ್ ಮಾಡ್ತಾರೆ, ಇದರಿಂದ ಗಾಡಿ ಡ್ಯಾಮೇಜ್ ಆಗುತ್ತದೆ. ಪೊಲೀಸರು ಕೂಡ ಮಾನವೀಯತೆ ಇಲ್ಲದ ಹಾಗೆ ದರ್ಪ ಮೆರೆಯುತ್ತಾರೆ ಎಂದು ಜನಾಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನಲೆ ಟೋಯಿಂಗ್ ಕೈ ಬಿಡುವಂತೆ ಮನವಿ ಮಾಡಲಾಗಿತ್ತು. ಬಿಬಿಎಂಪಿ ಸಂಪೂರ್ಣವಾಗಿ ಖಾಸಗಿ ಎಜೆನ್ಸಿ ಮೂಲಕ ಟೋಯಿಂಗ್ ಮಾಡಿಸಲು ಮುಂದಾಗಿದೆ.
BIGG NEWS : ಕಿಲ್ಲರ್ ‘BMTC’ ಗೆ ಬೆಂಗಳೂರಿನಲ್ಲಿ ಮತ್ತೊಂದು ಬಲಿ : ಬಸ್ ಹರಿದು ಬೈಕ್ ಸವಾರ ಸಾವು