ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಬಿಗ್ ಶಾಕ್ ಎದುರಾಗಿದ್ದು, ಇನ್ಮುಂದೆ ದೇಗುಲಕ್ಕೆ ಪ್ರತೀ ದಿನ 90 ಸಾವಿರ ಭಕ್ತರಿಗೆ ಮಾತ್ರ ಪ್ರವೇಶ ಎಂದು ತಿರುವನಂತಪುರದಲ್ಲಿ ಸಿಎಂ ಪಿಣರಾಯಿ ವಿಜಯನ್ ಸಭೆ ನಡೆಸಿ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ
BIGG NEWS: ಮಾಂಡೌಸ್ ಚಂಡಮಾರುತ ಆರ್ಭಟಕ್ಕೆ ಭಾರೀ ಮಳೆ : ತಮಿಳುನಾಡಿನ 2 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ
ಆನ್ಲೈನ್ನಲ್ಲಿ 1,07,260 ಮಂದಿ ದೇಗುಲಕ್ಕೆ ಭೇಟಿ ನೀಡಲು ನೋಂದಣಿ ಮಾಡಿಸಿಕೊಂಡಿದ್ದ ಬೆನ್ನಲ್ಲೇ ಹೆಚ್ಚುವರಿ ಭದ್ರತೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ
ಈಗ ಇರುವ ಮುಂಜಾನೆ 3ರಿಂದ ರಾತ್ರಿ 11ರ ವರೆಗಿನ ದೇವರ ದರ್ಶನದ ಸಮಯವನ್ನು ರಾತ್ರಿ 12ರ ವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ.
BIGG NEWS: ಮಾಂಡೌಸ್ ಚಂಡಮಾರುತ ಆರ್ಭಟಕ್ಕೆ ಭಾರೀ ಮಳೆ : ತಮಿಳುನಾಡಿನ 2 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ
ನಿಳಕ್ಕಲ್ನಲ್ಲಿ ಇನ್ನೂ ಹೆಚ್ಚು ವಾಹನಗಳಿಗೆ ನಿಲುಗಡೆ ಕಲ್ಪಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿಯೂ ಚರ್ಚೆ ನಡೆಸಲಾಗಿದೆ. ರವಿವಾರ ಕೇರಳ ಹೈಕೋರ್ಟ್ ನಡೆಸಿದ್ದ ವಿಚಾರಣೆ ವೇಳೆ ವಾಹನಗಳ ಪಾರ್ಕಿಂಗ್ ಮತ್ತು ಜನರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಈ ನಿಟ್ಟಿನಲ್ಲಿ ದೇಗುಲಕ್ಕೆ ಪ್ರತೀ ದಿನ 90 ಸಾವಿರ ಭಕ್ತರಿಗೆ ಮಾತ್ರ ಪ್ರವೇಶಅವಕಾಶ ನೀಡಲಾಗುವುದು ಎಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ
BIGG NEWS: ಮಾಂಡೌಸ್ ಚಂಡಮಾರುತ ಆರ್ಭಟಕ್ಕೆ ಭಾರೀ ಮಳೆ : ತಮಿಳುನಾಡಿನ 2 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ