ಬೆಂಗಳೂರು : ಶಿಕ್ಷಣ ಇಲಾಖೆಯು ರಾಜ್ಯದ ಶಾಲಾ ಮಕ್ಕಳ ಬಿಸಿಯೂಟ ಸಮಯದ ಬದಲಾವಣೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದು, 1-5 ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ 1 ಗಂಟೆಯಿಂದ 1.45 ರವರೆಗೆ ಬಿಸಿಯೂಟ ವಿತರಿಸಲು ಸೂಚನೆ ನೀಡಿದೆ.
ಶಾಲೆಗಳಲ್ಲಿ ಎಲ್ಲಾ ಮಕ್ಕಳನ್ನು ಒಟ್ಟಿಗೆ ಸಾಲಾಗಿ ನಿಲ್ಲಿಸಿ ಆಹಾರ ವಿತರಿಸುವುದು ಹಾಗೂ ಕಡಿಮೆ ಸಮಯದಲ್ಲಿ ಊಟ ಸ್ವೀಕರಿಸುವುದು, ತಟ್ಟೆ-ಲೋಟ ತೊಳೆಯುವಾಗ ನೂಕನುಗ್ಗಲು ತಡೆಗಟ್ಟಬೇಕಾಗಿದೆ. ಈ ಹಿನ್ನೆಲೆಯಲ್ಲಿ 1 ರಿಂದ 5 ನೇ ತರಗತಿ ಮಕ್ಕಳಿಗೆ 1 ಗಂಟೆಯಿಂದ 1.45 ರವರೆಗೆ, 6 ರಿಂದ 10 ನೇ ತರಗತಿ ಮಕ್ಕಳಿಗೆ 2 ರಿಂದ 2.45 ರವರೆಗೆ ಬಿಸಿಯೂಟ ವಿತರಿಸಲು ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
ಇನ್ನು ರಾಜ್ಯ ಸರ್ಕಾರದ ಮೌಲ್ಯಮಾಪನ ಪ್ರಾಧಿಕಾರ ಮತ್ತು ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯವು ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮಾಡಿರುವ ವಿವಿಧ 20 ಶಿಫಾರಸುಗಳನ್ನು ಮಾಡಿದೆ.
BIGG NEWS : ರಾಜ್ಯ ಸರ್ಕಾರದಿಂದ ಚರ್ಮಗಂಟು ರೋಗ ಪರಿಹಾರಕ್ಕೆ 30 ಕೋಟಿ ರೂ. ಬಿಡುಗಡೆ : ಸಚಿವ ಪ್ರಭು ಚವ್ಹಾಣ್ ಮಾಹಿತಿ