ಬೆಂಗಳೂರು : ಬೆಂಗಳೂರಿನಲ್ಲಿ ಇಂದಿನಿಂದ ಜಿ 20(G20) ಶೃಂಗಸಭೆ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಬೆಂಗಳೂರು ಹೊರವಲಯದಲ್ಲಿರುವ ದೇವನಹಳ್ಳಿಯ ಪ್ರೆಸ್ಟಿಜ್ ಗಾಲ್ಪ್ ಶೈರ್ ಜೆಡಬ್ಯ್ಲೂ ಮ್ಯಾರಿಯಟ್ ಹೋಟೆಲ್ನಲ್ಲಿಶೃಂಗಸಭೆ ನಡೆಯಲಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಡಿ.17 ರವರೆಗೂ ಸಭೆ ನಡೆಯಲಿದ್ದು, ಹಲವು ದೇಶಗಳ ಹಣಕಾಸು ಕಾರ್ಯದರ್ಶಿ ಗಳು ಸೇರಿದಂತೆ ಹಲವು ಗಣ್ಯರು ಜಿ20 ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಶೃಂಗಸಭೆಗೆ ಆಗಮಿಸುವ ಅತಿಥಿಗಳ ಭದ್ರತೆಗೆ 6 ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದ್ದು, ಸುಮಾರು 700 ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಶೃಂಗಸಭೆ ನಡೆಯುವ ರೆಸಾರ್ಟ್ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಒ ಟ್ಟು ಎರಡು ಹಂತದಲ್ಲಿ ನಡೆಯಲಿರುವ ಐದು ದಿನಗಳ ಸಭೆ ಇದಾಗಿದ್ದು,ಮೊದಲಿಗೆ 40 ದೇಶಗಳ ಪ್ರಮುಖ ಅಧಿಕಾರಿಗಳಿಂದ 3 ದಿನ ಸಭೆ ನಡೆಯಲಿದೆ.
BIGG NEWS : ಪ್ರಯಾಣಿಕರಿಗೆ ಬಿಗ್ ಶಾಕ್ : ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮತ್ತೆ ‘KSRTC’ ನೌಕರರ ಪ್ರತಿಭಟನೆ..!
BIGG NEWS : ರಾಜ್ಯ ಸರ್ಕಾರದಿಂದ ಚರ್ಮಗಂಟು ರೋಗ ಪರಿಹಾರಕ್ಕೆ 30 ಕೋಟಿ ರೂ. ಬಿಡುಗಡೆ : ಸಚಿವ ಪ್ರಭು ಚವ್ಹಾಣ್ ಮಾಹಿತಿ