ಇಂದೋರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಸೋಮವಾರ ಆಘಾತಕಾರಿ ಘಟನೆಯೊಂದು ನಡೆದಿದೆ.
ಕಾರು ಚಲಾಯಿಸುವಾಗ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿದ್ದ ಚಾಲಕನನ್ನು ಅಡ್ಡಗಟ್ಟಿದ ಟ್ರಾಫಿಕ್ ಪೋಲೀಸ್ ದಂಡ ವಿಧಿಸಲು ತಡೆಹಿಡಿದಿದ್ದಾರೆ. ಆದ್ರೆ, ಇವರಿಂದ ತಪ್ಪಿಸಿಕೊಳ್ಳಲು ಚಾಲಕ ಮುಂದಾದಾಗ, ಅವನನ್ನು ಅಡ್ಡಗಟ್ಟಲು ಟ್ರಾಫಿಕ್ ಪೋಲೀಸ್ ಕಾರಿಗೆ ಅಡ್ಡಲಾಗಿ ಬಂದಿದ್ದು, ಆತನ ಸಮೇತ ಚಾಲಕ ಕಾರು ಚಲಾಯಿಸಿದ್ದಾನೆ.
ಈ ವೇಳೆ ಬಾನೆಟ್ ಹಿಡಿದುಕೊಂಡ ಟ್ರಾಫಿಕ್ ಪೋಲೀಸ್ ಸಮೇತ ಚಾಲಕ ಸುಮಾರು ನಾಲ್ಕು ಕಿಲೋಮೀಟರ್ವರೆಗೆ ಕಾರು ಚಲಾಯಿಸಿದ್ದಾನೆ. ಘಟನೆಯ ದೃಶ್ಯಾವಳಿ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗುತ್ತಿದೆ.
#WATCH मध्य प्रदेश: इंदौर में एक कार चालक ने एक ट्रैफिक सिपाही को कार के बोनट पर घसीटा। वीडियो CCTV का है। pic.twitter.com/V4I0lov8Xv
— ANI_HindiNews (@AHindinews) December 12, 2022
Madhya Pradesh | A traffic policeman was dragged on the bonnet of a car in Indore
I stopped a man who was driving the car while talking on phone. I asked him to pay the challan but he refused to pay and tried to flee the spot: Shiv Singh Chauhan, traffic policeman
(Pic 1: CCTV) pic.twitter.com/p9L85g3KIe
— ANI MP/CG/Rajasthan (@ANI_MP_CG_RJ) December 12, 2022
ಸತ್ಯ ಸಾಯಿ ಛೇದಕದಲ್ಲಿ ಈ ಘಟನೆ ನಡೆದಿದೆ. ಕಾರು ಚಾಲನೆ ಮಾಡುವಾಗ ವ್ಯಕ್ತಿ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿರುವುದನ್ನು ನೋಡಿದ ಟ್ರಾಫಿಕ್ ಹೆಡ್ ಕಾನ್ಸ್ಟೆಬಲ್ ಶಿವಸಿಂಗ್ ಚೌಹಾಣ್ (50) ಕಾರಿಗೆ ಕೈಬೀಸಿ ನಿಲ್ಲಿಸಿ ದಂಡ ಪಾವತಿಸುವಂತೆ ಕೇಳಿದಾಗ ಕೋಪಗೊಂಡ ಚಾಲಕ ಎಸ್ಕೇಪ್ ಆಗಲು ಯತ್ನಿಸಿದ. ಅವನನ್ನು ತಡೆಯಲು ಚೌಹಾಣ್ ಕಾರಿನ ಬಾನೆಟ್ ಹಿಡಿದುಕೊಂಡರು. ಆದ್ರೂ ಚಾಲಕ ಕಾರು ನಿಲ್ಲಿಸದೇ ನಾಲ್ಕು ಕಿಲೋಮೀಟರ್ವರೆಗೆ ಕಾರು ಚಲಾಯಿಸಿದ್ದಾನೆ.
ಆರೋಪಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಗ್ವಾಲಿಯರ್ ನಿವಾಸಿಯಾಗಿರುವ ಆರೋಪಿಯಿಂದ ಪಿಸ್ತೂಲ್ ಮತ್ತು ರಿವಾಲ್ವರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಸ್ತಾನ: ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ… ಕಾರಣ ನಿಗೂಢ
ರಾಜಸ್ತಾನ: ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ… ಕಾರಣ ನಿಗೂಢ