ಕೆಎನ್ಎನ್ಡಿಜಿಟಲ್ ಡೆಸ್ಕ್ : ಪೋರ್ಚುಗಲ್ನ 64 ವರ್ಷದ ವ್ಯಕ್ತಿಯೊಬ್ಬರಿಗೆ ಕಳೆದ ಕೆಲವು ದಿನಗಳಿಂದ ಕಿವಿಯಲ್ಲಿ ತುರಿಕೆ ಮತ್ತು ರಕ್ತಸ್ರಾವದ ಜೊತೆಗೆ ತೀವ್ರ ನೋವು ಇತ್ತು. ಅದನ್ನ ಸಹಿಸಲಾಗದೇ ಆತ ಸ್ಥಳೀಯ ಆಸ್ಪತ್ರೆಗೆ ಹೋಗಿದ್ದಾನೆ. ಅಲ್ಲಿನ ವೈದ್ಯರು ಆ ವ್ಯಕ್ತಿಯ ಕಿವಿಗೆ ಹಲವು ಪರೀಕ್ಷೆಗಳನ್ನ ನಡೆಸಿ, ಬಳಿಕ ಸ್ಕ್ಯಾನ್ ರಿಪೋರ್ಟ್ ಕಂಡು ಬೆಚ್ಚಿಬಿದ್ದಿದ್ದಾರೆ.
ಹೌದು, ಸ್ಯಾನಿಂಗ್ ರಿಪೋರ್ಟ್ ಕಂಡು ವೈದ್ಯರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಅಸಲಿಗೆ, ಕಿವಿಯಲ್ಲಿ ಮ್ಯಾಗೋಟ್ ಹುಳುಗಳು ಗೂಡು ಕಟ್ಟಿರುವುದು ಕಂಡು ಬಂದಿದ್ದು, ಮೇಲಾಗಿ ಈಗಾಗಲೇ ಕಿವಿಯ ಕೆಲ ಭಾಗವನ್ನ ತಿಂದು ರಂಧ್ರ ಮಾಡಿರುವುದು ಗಮನಕ್ಕೆ ಬಂದಿದೆ. ವೈದ್ಯರು ತಕ್ಷಣ ಕಿವಿಯನ್ನು ಸ್ವಚ್ಛಗೊಳಿಸಿ ಲಾರ್ವಾ ಹಂತದಲ್ಲಿದ್ದ ಹುಳುಗಳನ್ನು ಹೊರತೆಗೆದರು. ಏತನ್ಮಧ್ಯೆ, ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅದನ್ನ ನೋಡಿ ನೆಟ್ಟಿಗರು ಹೆದರಿ ತಮ್ಮ ಅಭಿಪ್ರಾಯಗಳನ್ನ ವ್ಯಕ್ತ ಪಡಿಸುತ್ತಿದ್ದಾರೆ.
‘ಗುಜರಾತ್ ಮಾದರಿಯಲ್ಲೇ ಕರ್ನಾಟಕದಲ್ಲೂ ಹೊಸಬರಿಗೆ ಅವಕಾಶ ನೀಡಬೇಕು’ : ಬಸನಗೌಡ ಪಾಟೀಲ್ ಯತ್ನಾಳ್
BIGG NEWS : ಚುನಾವಣೆ ಬಳಿಕ ಸಿಎಂ ಅಭ್ಯರ್ಥಿ ಹೆಸರು ಘೋಷಣೆ : ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟನೆ