ಬೆಂಗಳೂರು : ಮೋಹಕ ತಾರೆ ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾಗೆ ವಿಘ್ನ ಎದುರಾಗಿದ್ದು, ಈ ಸಿನಿಮಾದ ಶೀರ್ಷಿಕೆ ಬಳಸದಂತೆ ಕನ್ನಡ ಚಿತ್ರರಂಗದ ಖ್ಯಾದತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ಬಣ್ಣದ ಗೆಜ್ಜೆ ಸಿನಿಮಾದ ಜನಪ್ರಿಯ ಹಾಡು ಸ್ವಾತಿ ಮುತ್ತಿನ ಮಳೆಹನಿಯೇ’ . ಈ ಹಾಡು ಇಂದಿಗೂ ಜನರ ಬಾಯಲ್ಲಿ ಗುನುಗುಟ್ಟುತ್ತಿದೆ. ಅದೇ ಹಾಡಿನ ಸಾಲನ್ನು ಇಟ್ಟುಕೊಮಡು ರಮ್ಮಾ ತನ್ನ ಮೊದಲ ನಿರ್ಮಾಣದ ಸಿನಿಮಾಗೆ ಟೈಟಲ್ ಆಗಿ ಇಟ್ಟಿದ್ದರು. ಇದೀಗ ಸ್ವಾತಿ ಮುತ್ತಿನ ಮಳೆಹನಿಯೇ’ ಟೈಟಲ್ ಬಳಸದಂತೆ ರಾಜೇಂದ್ರ ಸಿಂಗ್ ಬಾಬು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಈಗಾಗಲೇ ನಾನು ಈ ಟೈಟಲ್ ನೊಂದಣಿ ಮಾಡಿಸಿರುವುದಾಗಿ ರಾಜೇಂದ್ರ ಸಿಂಗ್ ಬಾಬು ಹೇಳಿದ್ದು, ಟೈಟಲ್ ನ್ನು ಯಾರಿಗೂ ನೀಡಬಾರದು ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ತಾಕೀತು ಮಾಡಿದ್ದಾರೆ.
ರಮ್ಯಾ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿ ನಟಿಸಿದ್ದಾರೆ. ಸಿನಿಮಾದ ಬಗ್ಗೆ ಈಗಾಗಲೇ ಬಹಳ ಕುತೂಹಲ ಕೆರಳಿಸಿದೆ. ಇನ್ನೂ ವಿವಾದಕ್ಕೆ ಯಾವ ರೀತಿ ತೆರೆ ಬೀಳುತ್ತೆ, ಚಿತ್ರತಂಡ ಸಿನಿಮಾದ ಟೈಟಲ್ ಬದಲಾಯಿಸುತ್ತದೆಯಾ ಎಂಬುದನ್ನು ಕಾದು ನೋಡಬೇಕಾಗಿದೆ.