ಬಳ್ಳಾರಿ : ಬಳ್ಳಾರಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಖಾಲಿಯಿರುವ ಗ್ರಾಮ ಪಂಚಾಯಿತಿವಾರು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ನಗರ ಪುನರ್ವಸತಿ ಕಾರ್ಯಕರ್ತ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಗೋವಿಂದಪ್ಪ ಅವರು ತಿಳಿಸಿದ್ದಾರೆ.
BIGG NEWS : ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಶಾಕ್ : ಶೀಘ್ರವೇ ಮಾಜಿ ಎಂಎಲ್ ಸಿ ಸಂದೇಶ್ ನಾಗರಾಜ್ ಕಾಂಗ್ರೆಸ್ ಸೇರ್ಪಡೆ
ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ನಿಡಗುರ್ತಿ ಗ್ರಾಪಂ, ಅಗ್ರಹಾರ ಗ್ರಾಪಂ, ಯರಯ್ಯನಹಳ್ಳಿ ಗ್ರಾಪಂ, ಬನ್ನಿಹಟ್ಟಿ ಗ್ರಾಪಂ, ತಾಳೂರು ಗ್ರಾಪಂ, ರಾಜಪುರ ಗ್ರಾಪಂ, ಹಿರಿಕೆರೆಯ್ಯ ಹಳ್ಳಿ ಗ್ರಾಪಂ ಮತ್ತು ಬಳ್ಳಾರಿ ತಾಲ್ಲೂಕಿನ ಅಮರಾಪುರ ಗ್ರಾಪಂ, ಚಾನಾಳು ಗ್ರಾಪಂ ಮತ್ತು ಸಿರುಗುಪ್ಪ ತಾಲ್ಲೂಕಿನ ಬೈರಾಪುರ ಗ್ರಾಪಂ ಸೇರಿದಂತೆ ಬಳ್ಳಾರಿ ಜಿಲ್ಲೆಯ ಒಟ್ಟು 10 ಗ್ರಾಮ ಪಂಚಾಯಿತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳು(ಗಿಖW) ಹಾಗೂ ಬಳ್ಳಾರಿ ಮಹಾ ನಗರ ಪಾಲಿಕೆಯ 03 ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳು(UಖW) ಭರ್ತಿಗೆ ಆಹ್ವಾನಿಸಲಾಗಿದೆ.
ಆಯಾ ತಾಲ್ಲೂಕಿನ ಸದರಿ ಹುದ್ದೆಗಳನ್ನು ತಾಲ್ಲೂಕು ಪಂಚಾಯತಿಯ ಕಾರ್ಯ ನಿರ್ವಹಣಾ ಅಧಿಕಾರಿಗಳು ಇವರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮುಖಾಂತರ ನೇಮಕಗೊಳಿಸಬೇಕಾಗಿರುತ್ತದೆ.
ಬಳ್ಳಾರಿ ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 03 ನಗರ ಪುನರ್ವಸತಿ ಕಾರ್ಯಕರ್ತರ (UಖW) ಹುದ್ದೆಗಳು ಖಾಲಿಯಿದ್ದು, ಮಹಾ ನಗರ ಪಾಲಿಕೆ ಆಯುಕ್ತರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮುಖಾಂತರ ನಿಯಮಾನುಸಾರ ನೇಮಕಗೊಳಿಸಬೇಕಾಗಿರುತ್ತದೆ.
ಸದರಿ ಹುದ್ದೆಗಳು ಗೌರವ ಧನ ಆಧಾರಿತ ತಾತ್ಕಾಲಿಕ ಹುದ್ದೆಗಳಾಗಿರುತ್ತವೆ. ಹುದ್ದೆಗಳಿಗೆ ಮಾಸಿಕ ಗೌರವಧನ ರೂ.9ಸಾವಿರ ಇರುತ್ತದೆ. ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರುವ ವಿಕಲಚೇತನರು (ಕರ್ತವ್ಯ ನಿರ್ವಹಿಸಲು ಸಮರ್ಥರಿರುವವರು) ಅರ್ಜಿ ಸಲ್ಲಿಸಬಹುದು.
BIGG NEWS: ಬೆಳ್ತಂಗಡಿಯಲ್ಲಿ ನದಿಯ ಸೇತುವೆ ಬಳಿ ಒಂಟಿ ಸಲಗ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 27 ಆಗಿರುತ್ತದೆ.
*ಎಂಆರ್ಡಬ್ಲ್ಯೂ ಅರ್ಹತೆಗಳು: ಗ್ರಾಮೀಣಪುನರ್ವಸತಿ ಕಾರ್ಯಕರ್ತರು ಸ್ಥಳಿಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. (ಸ್ಥಳಿಯರಾಗಿರಬೇಕು), ವಯೋಮಿತಿ 18-45 ವರ್ಷದ ಆರೋಗ್ಯವಂತರಾಗಿರಬೇಕು. ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರಬೇಕು. ಒಂದು ವೇಳೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅಭ್ಯರ್ಥಿಗಳು ದೊರೆಯದಿದ್ದಲ್ಲಿ ಎಸ್.ಎಸ್.ಎಲ್.ಸಿ ಅನುತ್ತಿರ್ಣರಾದ ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಸಮಿತಿಯು ಪರಿಗಣಿಸಲಾಗುವುದು.
ಅಂಗವಿಕಲರಾಗಿರಬೇಕು: ಭಾಗಶ: ಅಂಧರು, ಭಾಗಶ:ಶ್ರವಣ ದೋಷವುಳ್ಳವರು, (ಮೈಲ್ಡ್ ಮತ್ತು ಮಾಡರೇಟ್) ಹಾಗೂ ದೈಹಿಕ ಅಂಗವಿಕಲರಿಗೆ ಅವಕಾಶ ಕಲ್ಪಿಸುವುದು.
ಮೂರು ರೀತಿಯ ಅಂಗವಿಕಲರಿಗೆ ಸಮಾನವಾಗಿ ಆಯ್ಕೆ ಮಾಡಬೇಕು ಒಂದು ವರ್ಗದ ಅಂಗ ವಿಕಲರಿಗೆ ಆಯ್ಕೆಗೆ ಲಭ್ಯವಿಲ್ಲದಿದ್ದಲ್ಲಿ ಇನ್ನೊಂದು ವರ್ಗದಲ್ಲಿರುವ ಅಂಗವಿಕಲ ಅಭ್ಯರ್ಥಿ ಆಯ್ಕೆ ಮಾಡಲು ಕ್ರಮ ಕೈಗೊಳ್ಳಬೇಕು. ಮಹಿಳೆಯರಿಗೆ ಮೊದಲ ಆದ್ಯತೆ ನೀಡಬೇಕು ಅಂಗವಿಕಲರಿಗೆ ಶೇ.40ಕ್ಕಿಂತ ಮೇಲ್ಪಟ್ಟಿರಬೇಕು. ಅಂಗವಿಕಲರ ಬಗ್ಗೆ ವೈದಿಕೀಯ ಮಂಡಳಿ ಪ್ರಮಾಣ ಪತ್ರ/ಗುರುತಿನ ಚೀಟಿ ಹೊಂದಿರಬೇಕು. ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಸಂಚರಿಸಿ ಮಾಹಿತಿ/ಸೌಲಭ್ಯ ಕಲ್ಪಿಸಲು ಸಮರ್ಥರಾಗಿರಬೇಕು. ಗೌರವಧನ ಅವಧಿ ಮುಂದುವರಿಸುವ ಬಗ್ಗೆ ಒಂದು ವರ್ಷದ ನಂತರ ಅವರ ಕಾರ್ಯ ವೈಖರಿಗೊಳಪಟ್ಟಿದ್ದು ಮುಂದುವರಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಆಯ್ಕೆ ಮಾಡುವಾಗ ಸರ್ಕಾರ ನಿಗದಿ ಪಡಿಸಿರುವ ಕರ್ತವ್ಯಗಳನ್ನು ನಿರ್ವಹಿಸಲು “ಸಮರ್ಥಕ” ಎಂಬ ಬಗ್ಗೆ ಪರಿಶೀಲಿಸಿ ಆಯ್ಕೆ ಮಾಡುವುದು. ಹುದ್ದೆಯು ಗೌರವಧನದ ಆಧಾರದ ಮೇಲೆ ಇರುವುದರಿಂದ ಇವರನ್ನು ಯಾವಾಗ ಬೇಕಾದರು ಕೆಲಸದಿಂದ ತೆಗೆದು ಹಾಕ ಬಹುದಾಗಿ/ಬಿಡುಗಡೆ ಮಾಡಬಹುದಾಗಿದೆ. ಗೌರವಧನದ ಆಧಾರದ ಮೇಲೆ ಕೆಲಸ ನಿರ್ವಹಿಸುವುದರಿಂದ ಖಾಯಂಗೊಳಿಸುವಂತೆ ಕೋರಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
*ಎಂಆರ್ಡಬ್ಲ್ಯೂ ಅರ್ಹತೆಗಳು: ಸ್ಥಳೀಯ ಪುನರ್ವಸತಿ ಕಾರ್ಯಕರ್ತರು ಪಟ್ಟಣ ಪಂಚಾಯತಿ /ಪುರಸಭೆ /ನಗರಸಭೆ/ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. (ಸ್ಥಳಿಯರಾಗಿರಬೇಕು) ವಯೋಮಿತಿ 18-45 ವರ್ಷದ ಆರೋಗ್ಯವಂತರಾಗಿರಬೇಕು. ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರಬೇಕು. ಒಂದು ವೇಳೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅಭ್ಯರ್ಥಿಗಳು ದೊರೆಯದಿದ್ದಲ್ಲಿ ಎಸ್.ಎಸ್.ಎಲ್.ಸಿ ಅನುತ್ತಿರ್ಣರಾದ ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಸಮಿತಿಯು ಪರಿಗಣಿಸಲಾಗುವುದು. ಅಂಗವಿಕಲರಾಗಿರಬೇಕು: ಭಾಗಶ: ಅಂಧರು, ಭಾಗಶ:ಶ್ರವಣ ದೋಷವುಳ್ಳವರು, (ಮೈಲ್ಡ್ ಮತ್ತು ಮಾಡರೇಟ್) ಹಾಗೂ ದೈಹಿಕ ಅಂಗವಿಕಲರಿಗೆ ಅವಕಾಶ ಕಲ್ಪಿಸುವುದು. ಮೂರು ರೀತಿಯ ಅಂಗವಿಕಲರಿಗೆ ಸಮಾನವಾಗಿ ಆಯ್ಕೆ ಮಾಡಬೇಕು ಒಂದು ವರ್ಗದ ಅಂಗ ವಿಕಲರಿಗೆ ಆಯ್ಕೆಗೆ ಲಭ್ಯವಿಲ್ಲದಿದ್ದಲ್ಲಿ ಇನ್ನೊಂದು ವರ್ಗದಲ್ಲಿರುವ ಅಂಗವಿಕಲ ಅಭ್ಯರ್ಥಿ ಆಯ್ಕೆ ಮಾಡಲು ಕ್ರಮ ಕೈಗೊಳ್ಳಬೇಕು. ಮಹಿಳೆಯರಿಗೆ ಮೊದಲ ಆದ್ಯತೆ ನೀಡಬೇಕು
ಅಂಗವಿಕಲರಿಗೆ ಶೇ.40ಕ್ಕಿಂತ ಮೇಲ್ಪಟ್ಟಿರಬೇಕು. ಅಂಗವಿಕಲರ ಬಗ್ಗೆ ವೈದಿಕೀಯ ಮಂಡಳಿ ಪ್ರಮಾಣ ಪತ್ರ/ಗುರುತಿನ ಚೀಟಿ ಹೊಂದಿರಬೇಕು. ನಗರ/ಪುರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸಿ ಮಾಹಿತಿ/ಸೌಲಭ್ಯ ಕಲ್ಪಿಸಲು ಸಮರ್ಥರಾಗಿರಬೇಕು. ಗೌರವಧನ ಅವಧಿ ಮುಂದುವರಿಸುವ ಬಗ್ಗೆ ಒಂದು ವರ್ಷದ ನಂತರ ಅವರ ಕಾರ್ಯ ವೈಖರಿಗೊಳಪಟ್ಟಿದ್ದು ಮುಂದುವರಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಆಯ್ಕೆ ಮಾಡುವಾಗ ಸರ್ಕಾರ ನಿಗದಿ ಪಡಿಸಿರುವ ಕರ್ತವ್ಯಗಳನ್ನು ನಿರ್ವಹಿಸಲು “ಸಮರ್ಥಕ” ಎಂಬ ಬಗ್ಗೆ ಪರಿಶೀಲಿಸಿ ಆಯ್ಕೆ ಮಾಡುವುದು. ಹುದ್ದೆಯು ಗೌರವಧನದ ಆಧಾರದ ಮೇಲೆ ಇರುವುದರಿಂದ ಇವರನ್ನು ಯಾವಾಗ ಬೇಕಾದರು ಕೆಲಸದಿಂದ ತೆಗೆದು ಹಾಕಬಹುದಾಗಿದೆ/ಬಿಡುಗಡೆ ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಎಂಆರ್ಡಬ್ಲ್ಯೂ ರಾಣಿ ಅವರ ಮೊ.8880875620, ಸಂಡೂರು ಎಂಆರ್ಡಬ್ಲ್ಯೂ ಕರಿಬಸಜ್ಜ ಅವರ ಮೊ.9632052270, ಸಿರುಗುಪ್ಪ ಎಂಆರ್ಡಬ್ಲ್ಯೂ ಸಾಬೇಶ ಅವರ ಮೊ.9743509698 ಹಾಗೂ ಜಿಲ್ಲಾ ಸಂಯೋಜಕ ಟೇಕ್ ರಾಜ್ ಅವರ ಮೊ.9481320119 ಅಥವಾ ಕಚೇರಿ ದೂ.08392267886ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.