ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ರಂಗಾಪುರ ಗ್ರಾಮದಲ್ಲಿ ಹುಚ್ಚುನಾಯಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ.
ಹುಚ್ಚು ನಾಯಿ ದಾಳಿಗೆ ಒಂದೇ ದಿನ ಮಕ್ಕಳು ಸೇರಿದಂತೆ 10 ಮಂದಿಗೆ ಕಡಿದಿರುವ ಘಟನೆ ನಡೆದಿದೆ. ಸುಜಾತ ಮಲ್ಲಾಪೂರ , ಶಿವಕುಮಾರ ಮಲ್ಲಾಪೂರ , ಶಿವಕುಮಾರ ಕಡಿವಾಲ , ಗಿರಿಯಪ್ಪ ನೆಲ್ಲೂರು , ಶರಣಪ್ಪ ಮಲ್ಲಾಪೂರ ಸೇರಿದಂತೆ ಇನ್ನೂ 5 ಜನರಿಗೆ ಹುಚ್ಚುನಾಯಿ ಕಡಿದಿದೆ.
ಗಾಯಗೊಂಡ ಸುಜಾತ ಮಲ್ಲಾಪೂರ ಹಾಗೂ ಶಿವಕುಮಾರ ಮಲ್ಲಾಪೂರ ಎಂಬವರು ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರರಿಗೆ ಹನುಮನಾಳ ಆಸ್ಪತ್ರೆ ಹಾಗೂ ಇನ್ನೂ ಕೆಲವರಿಗೆ ಬಾದಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಗ್ರಾಮದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಯಿಗಳ ಉಪಟಳ ತಪ್ಪಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಅಲ್ಲದೇ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.