ತುಮಕೂರು : ನನ್ನ ಸೊಸೆ ಆಗುವವಳಿಗೆ 2 ಎಕರೆ ಅಡಿಕೆ ತೋಟ ಬರೆದ ಕೊಡುವೆ ಎಂದು ಕುಣಿಗಲ್ ಗ್ರಾಮದ ರೈತರೊಬ್ಬರು ಬಿಗ್ ಆಫರ್ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Heart attack : ಯುವಜನತೆಗೆ ಏಕೆ ಹೆಚ್ಚು ʻಹೃದಯಾಘಾತʼದ ಸಮಸ್ಯೆ ಕಾಡುತ್ತಿದೆ? ಇಲ್ಲಿದೆ ತಜ್ಞರು ಕೊಟ್ಟ ಕಾರಣ
ಹೌದು, ಕುಣಿಗಲ್ ತಾಲೂಕಿನ ಹುತ್ತರಿ ಗ್ರಾಮದ ರುದ್ರಯ್ಯ ಎಂಬ ವ್ಯಕ್ತಿಯೊಬ್ಬರು ತಮ್ಮ ಮಗನಿಗೆ ಮದುವೆಯಾಗುವ ಹುಡುಗಿಗೆ 2 ಎಕರೆ ಅಡಿಕೆ ತೋಟ ಬರೆದುಕೊಡುತ್ತೇನೆ. ಬಡವರ ಮನೆ ಹೆಣ್ಣು ಮಕ್ಕಳಾದ್ರೂ ಪರವಾಗಿಲ್ಲ. ಬೆಂಗಳೂರಿನಲ್ಲಿ ನನ್ನೊಂದು ಮನೆ ಇದೆ. 22 ಎಕರೆ ಜಮೀನಿದೆ. ಹುಡುಗಿ ವಿದ್ಯಾವಂತೆಯಾಗಿರಬೇಕು ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Heart attack : ಯುವಜನತೆಗೆ ಏಕೆ ಹೆಚ್ಚು ʻಹೃದಯಾಘಾತʼದ ಸಮಸ್ಯೆ ಕಾಡುತ್ತಿದೆ? ಇಲ್ಲಿದೆ ತಜ್ಞರು ಕೊಟ್ಟ ಕಾರಣ
26 ವರ್ಷದ ನನ್ನ ಮಗನಿಗೆ ಮದುವೆಯಾಗುವ ಹುಡುಗಿಗೆ ಬಂಗಾರ ಮಾಡಿಸಿಕೊಡುವೆ, 85 ಸಾವಿರ ರೂ.ಕೊಟ್ಟು ಗಾಡಿ ಕೊಡುವೆ. ಮಗನನ್ನು ಮದುವೆಯಾಗುವ ಹುಡುಗಿಗೆ ಮಗಳ ಥರಾ ನೋಡಿಕೊಳ್ಳುವೆ. ನನ್ನ ಮಗನನ್ನು ಮದುವೆಯಾಗುವ ಹುಡುಗಿಗೆ 2 ಎಕರೆ ಅಡಿಕೆ ತೋಟ ಬರೆದುಕೊಡುವೆ ಎಂದು ಹೇಳಿದ್ದಾರೆ.