ಕಿಯೋಂಜಾರ್(ಒಡಿಶಾ): ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ 45 ವರ್ಷದ ವ್ಯಕ್ತಿ ಮತ್ತು ಆತನ ಪತ್ನಿಯನ್ನು ಅಪರಿಚಿತ ದುಷ್ಕರ್ಮಿಗಳು ಕಡಿದು ಕೊಂದಿರುವ ಘಟನೆ ನಡೆದಿದೆ.
ದುಷ್ಕರ್ಮಿಗಳು ವಾಮಾಚಾರ ನಡೆಸುವ ಸಲುವಾಗಿ ಈ ಜೋಡಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಭಾನುವಾರ ಬೆಳಗ್ಗೆ ದೈತಾರಿ ಪೊಲೀಸ್ ಠಾಣೆ ವ್ಯಾಪ್ತಿಯ ರಸೂಲ್ ಜುಮುಕಿಪಾಟಿಯ ಸಾಹಿ ಗ್ರಾಮದ ಅವರ ಮನೆಯ ಹೊರಗೆ ರಕ್ತದ ಮಡುವಿನಲ್ಲಿ ದಂಪತಿಯ ಶವಗಳು ಪತ್ತೆಯಾಗಿವೆ.
“ಹತ್ಯೆಯ ಹಿಂದೆ ವಾಮಾಚಾರದ ಶಂಕೆ ಇದೆ ಎಂದು ತೋರುತ್ತಿದೆ. ಈಗಾಗಲೇ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಕಿಯೋಂಜಾರ್ ಪೊಲೀಸ್ ವರಿಷ್ಠಾಧಿಕಾರಿ ಮಿತ್ರಭಾನು ಮಹಾಪಾತ್ರ ಪಿಟಿಐಗೆ ತಿಳಿಸಿದ್ದಾರೆ.
ಮೃತರನ್ನು ಬಹದಾ ಮುರ್ಮು (45) ಮತ್ತು ಆತನ ಪತ್ನಿ ಧನಿ (35) ಎಂದು ಗುರುತಿಸಲಾಗಿದೆ. ಈ ಜೋಡಿ ಶನಿವಾರ ರಾತ್ರಿ ತಮ್ಮ ಕೋಣೆಯ ಹೊರಗೆ ಮಲಗಿದ್ದರು. ನಾನು ಕೋಣೆಯೊಳಗೆ ಮಲಗಿದ್ದೆ. ಕಿರುಚಾಟ ಕೇಳಿ ಹೊರಬಂದಾಗ ನನ್ನ ಪೋಷಕರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದೆ” ಎಂದು ದಂಪತಿಯ ಪುತ್ರಿ ಸಿಂಗೋ ಹೇಳಿದ್ದಾರೆ.
ಮಾಹಿತಿ ತಿಳಿದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದೆ.
BIG NEW : ಇಂದು ಗುಜರಾತ್ ಮುಖ್ಯಮಂತ್ರಿಯಾಗಿ ʻಭೂಪೇಂದ್ರ ಪಟೇಲ್ʼ ಪ್ರಮಾಣ ವಚನ ಸ್ವೀಕಾರ |Bhupendra Patel
ಗುಜರಾತ್ನಲ್ಲಿ ಬಿಜೆಪಿ ಭರ್ಜರಿ ಗೆಲುವು: ತಡರಾತ್ರಿ ಅಹಮದಾಬಾದ್ನಲ್ಲಿ ರೋಡ್ಶೋ ನಡೆಸಿದ ಪ್ರಧಾನಿ ಮೋದಿ! | PM Modi
BIG NEW : ಇಂದು ಗುಜರಾತ್ ಮುಖ್ಯಮಂತ್ರಿಯಾಗಿ ʻಭೂಪೇಂದ್ರ ಪಟೇಲ್ʼ ಪ್ರಮಾಣ ವಚನ ಸ್ವೀಕಾರ |Bhupendra Patel
ಗುಜರಾತ್ನಲ್ಲಿ ಬಿಜೆಪಿ ಭರ್ಜರಿ ಗೆಲುವು: ತಡರಾತ್ರಿ ಅಹಮದಾಬಾದ್ನಲ್ಲಿ ರೋಡ್ಶೋ ನಡೆಸಿದ ಪ್ರಧಾನಿ ಮೋದಿ! | PM Modi