ಮೂಡಿಗೆರೆ : ಮೂಡಿಗೆರೆಯಲ್ಲಿ ಎರಡು ಪುಂಡಾನೆ ಸೆರೆಹಿಡಿದಿದ್ದ ಅರಣ್ಯ ಇಲಾಖೆ ಇದೀಗ ಕಾರ್ಯಾಚರಣೆ ನಡೆಸಿ ಮತ್ತೊಂದು ಪುಂಡಾನೆಯನ್ನು ಸೆರೆ ಹಿಡಿದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಈಗಾಗಲೇ ಎರಡು ಪುಂಡಾನೆಯನ್ನು ಸೆರೆಹಿಡಿದಿದ್ದ ಅರಣ್ಯ ಇಲಾಖೆ ಇದೀಗ ಮತ್ತೊಂದು ಕಾಡಾನೆಯನ್ನು ಸೆರೆಹಿಡಿದಿದೆ. ಮೂಡಿಗೆರೆಯ ಹೊಸಬಳ್ಳಿಯಲ್ಲಿ ಮತ್ತಿಗೋಡು, ದುಬಾರೆಯಿಂದ ಐದು ಸಾಕಾನೆಗಳನ್ನು ಕರೆತಂದ ಅರಣ್ಯ ಇಲಾಖೆ ಒಂದು ‘ಪುಂಡಾನೆ’ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿತ್ತು. ಆನೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಭಾರೀ ಹರಸಾಹಸ ಪಟ್ಟಿದ್ದರು. ಡ್ರೋನ್ ಕ್ಯಾಮೆರಾ ಬಳಕೆ ಮಾಡಿ ಆನೆಗಳನ್ನು ಹಿಡಿದಿದ್ದಾರೆ.
ಒಟ್ಟಿನಲ್ಲಿ ಮೂಡಿಗೆರೆಯಲ್ಲಿ ಜನರಿಗೆ ಭಾರೀ ಉಪಟಳ ನೀಡುತ್ತಿದ್ದ ಮೂರು ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ.
ಕೆಲವು ದಿನಗಳ ಹಿಂದೆ ಕಾಡಾನೆ ದಾಳಿಗೆ ಮೂಡಿಗೆರೆ ತಾಲೂಕು ಕುಂದೂರು ಸಮೀಪದ ಹುಲ್ಲೆಮನೆ ಗ್ರಾಮದ ಶೋಭಾ (45) ಮೃತಪಟ್ಟಿದ್ದರು. ಘಟನೆ ಗ್ರಾಮದ ಜನರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ಎಚ್ಚೆತ್ತ ಸರ್ಕಾರ ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಆದೇಶ ಹೊರಡಿಸಿತ್ತು. ಮೂಡಿಗೆರೆಯಲ್ಲಿ ಕಾಡಾನೆ ದಾಳಿ ಉಪಟಳ ಹೆಚ್ಚಾಗಿದ್ದು, ಕಾಡಾನೆ ದಾಳಿಗೆ ಇತ್ತೀಚೆಗೆ ಶೋಭಾ ಎಂಬ ಮಹಿಳೆ ಮೃತಪಟ್ಟ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
BIGG UPDATE: CBSE 10 ಮತ್ತು 12ನೇ ತರಗತಿ ಪರೀಕ್ಷೆ ವೇಳಾಪಟ್ಟಿ ನಕಲಿ : ಮಂಡಳಿ ಸ್ಪಷ್ಟನೆ