ಮಂಗಳೂರು : ನಗರದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಘಟನೆ ನಡೆದಿರುವ ಬಗ್ಗೆ ವರದಿಯಾಗಿದ್ದು, ಮುಸ್ಲಿಂ ಯುವಕರ ಜೊತೆ ಹಿಂದೂ ಯುವತಿಯರು ಸುತ್ತಾಡುತ್ತಿರುವುದನ್ನು ಕಂಡ ಭಜರಂಗ ದಳ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ.
ಮುಸ್ಲಿಂ ಯುವಕರೊಂದಿಗೆ ಹಿಂದೂ ಯುವತಿಯರು ತಡ ರಾತ್ರಿ ತಿರುಗುತ್ತಿದ್ದನ್ನು ನೋಡಿದ ಬಜರಂಗದಳದ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ. ಕೆಲವು ದಿನಗಳ ಹಿಂದೆ ಸುಳ್ಯದಲ್ಲಿ ಕಾಂತಾರ ಸಿನಿಮಾ ನೋಡಲು ಮುಸ್ಲಿಂ ಜೋಡಿಗೆ ಮುಸ್ಲಿಂ ಸಮುದಾಯದ ಯುವಕರು ಥಳಿಸಿದ್ದರು. ಈ ಘಟನೆ ಮಾಸುವ ಮುನ್ನವೇ ಮಂಗಳೂರಿನಲ್ಲಿ ಮತ್ತೊಂದು ಘಟನೆ ವರದಿಯಾಗಿದೆ.
ನಗರದ ಕೊಟ್ಟಾರ ಎಂಬಲ್ಲಿ ಹಿಂದೂ ಯುವತಿಯರೊಂದಿಗೆ ಮುಸ್ಲಿಂ ಯುವಕರು ತಡ ರಾತ್ರಿ 12 ಗಂಟೆಗೆ ಸುತ್ತಾಡುತ್ತಿದ್ದರು. ಕಂಡ ಭಜರಂಗ ದಳ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ. ಕೂಡಲೇ ನೈಟ್ ಬೀಟ್ ನಲ್ಲಿದ್ದ ಉರ್ವಾ ಪೊಲೀಸ್ ಠಾಣೆ ಪೊಲೀಸರು ಹಲ್ಲೆ ನಡೆಸಲು ಬಿಡಲಿಲ್ಲ, ನಂತರ ಯುವಕರನ್ನು ಕರೆತಂದು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎನ್ನಲಾಗಿದೆ.
ಮಾದರಿಯಾದ ತಂದೆ ; ‘ಪರಿಸರ ಸ್ನೇಹಿ’ಯಾಗಿ ಮಗಳ ಮದುವೆ, ಅಳಿಯನಿಗೆ ‘ಹಸು’ ಗಿಫ್ಟ್, ‘ಸಾವಯವ ಪದಾರ್ಥ’ದಿಂದ ಭೂರಿ ಭೋಜನ
BIGG NEWS: ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿದ್ದು ಕಾನೂನು ಬದ್ಧವಾಗಿದೆ; ಜಗದೀಶ್ ಶೆಟ್ಟರ್