ಮೂಡಿಗೆರೆ : ಮೂಡಿಗೆರೆಯಲ್ಲಿ ಎರಡು ಪುಂಡಾನೆ ಸೆರೆಹಿಡಿದಿದ್ದ ಅರಣ್ಯ ಇಲಾಖೆ ಇದೀಗ ಮತ್ತೊಂದು ಕಾಡಾನೆ ಸೆರೆಹಿಡಿಲು ಭಾರೀ ಕಾರ್ಯಾಚರಣೆ ನಡೆಸುತ್ತಿದೆ.
ಮೂಡಿಗೆರೆಯ ಹೊಸಹಳ್ಳಿಯಲ್ಲಿ ಮತ್ತಿಗೋಡು, ದುಬಾರೆಯಿಂದ ಐದು ಸಾಕಾನೆಗಳನ್ನು ಕರೆತಂದ ಅರಣ್ಯ ಇಲಾಖೆ ಒಂದು ‘ಪುಂಡಾನೆ’ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದೆ. ಆನೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಡ್ರೋನ್ ಕ್ಯಾಮೆರಾ ಬಳಕೆ ಮಾಡಿದ್ದಾರೆ.
ಮೂಡಿಗೆರೆಯಲ್ಲಿ ಜನರಿಗೆ ಭಾರೀ ಉಪಟಳ ನೀಡುತ್ತಿದ್ದ ಮೂರು ಆನೆ ಕಾಡಾನೆಗಳ ಪೈಕಿ ಎರಡು ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಇತ್ತೀಚೆಗೆ ಸೆರೆ ಹಿಡಿದಿದ್ದಾರೆ.
ಕೆಲವು ದಿನಗಳ ಹಿಂದೆ ಕಾಡಾನೆ ದಾಳಿಗೆ ಮೂಡಿಗೆರೆ ತಾಲೂಕು ಕುಂದೂರು ಸಮೀಪದ ಹುಲ್ಲೆಮನೆ ಗ್ರಾಮದ ಶೋಭಾ (45) ಮೃತಪಟ್ಟಿದ್ದರು. ಘಟನೆ ಗ್ರಾಮದ ಜನರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ಎಚ್ಚೆತ್ತ ಸರ್ಕಾರ ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಆದೇಶ ಹೊರಡಿಸಿತ್ತು. ಇದೀಗ ಮೂರು ಆನೆ ಕಾಡಾನೆಗಳ ಪೈಕಿ ಎರಡು ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ.ಮೂಡಿಗೆರೆಯಲ್ಲಿ ಕಾಡಾನೆ ದಾಳಿ ಉಪಟಳ ಹೆಚ್ಚಾಗಿದ್ದು, ಕಾಡಾನೆ ದಾಳಿಗೆ ಇತ್ತೀಚೆಗೆ ಶೋಭಾ ಎಂಬ ಮಹಿಳೆ ಮೃತಪಟ್ಟ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಹಿರಿಯನ್ನು ನಿರ್ಲಕ್ಷ ಮಾಡಿದ್ದೇ ಗುಜರಾತ್ನಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ: ಮಾಜಿ ಸಿಎಂ ವೀರಪ್ಪ ಮೋಯ್ಲಿ
‘ಬಿಜೆಪಿ ಸಂಪರ್ಕದಲ್ಲಿ ಕಾಂಗ್ರೆಸ್ ನ ಹತ್ತಕ್ಕೂ ಅಧಿಕ ಶಾಸಕರು’ : ಸಚಿವ ಅಶೋಕ್ ಸ್ಪೋಟಕ ಹೇಳಿಕೆ |R.Ashok