ನವದೆಹಲಿ: ಬಿಜೆಪಿ ಸಂಸದ ರವಿ ಕಿಶನ್ ಅವರು ಶುಕ್ರವಾರ ತಮ್ಮ ನಾಲ್ವರು ಮಕ್ಕಳಿಗೆ ಕಾಂಗ್ರೆಸ್ ಅನ್ನು ದೂಷಿಸಿದ್ದಾರೆ ಮತ್ತು ಆ ಸಮಯದಲ್ಲಿ ಕಾಂಗ್ರೆಸ್ನಿಂದ ಜನಸಂಖ್ಯಾ ನಿಯಂತ್ರಣ ಕಾನೂನು ಇದ್ದಿದ್ದರೆ ನಾನು ಮಕ್ಕಳನ್ನ ಹುಟ್ಟಿಸುವುದನ್ನು ನಿಲ್ಲಿಸುತ್ತಿದ್ದೆ ಅಂಥ ಹೇಳಿದ್ದಾರೆ.
ಆಜ್ ತಕ್ ನ ಮಾಧ್ಯಮ ಸಮಾವೇಶದಲ್ಲಿ ಮಾತನಾಡಿದ ರವಿ ಕಿಶನ್, ಸಮಾವೇಶದ ನಂತರ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ತಾವು ಸಜ್ಜಾಗಿರುವುದಾಗಿ ಹೇಳಿದರು. ಆದರೆ ಅವರ ನಾಲ್ಕು ಮಕ್ಕಳ ವಿಷಯವೇನು? ಅಂಥ ಕೇಳಿದ ವೇಳೆಯಲ್ಲಿ, “ಕಾಂಗ್ರೆಸ್ ಸರ್ಕಾರವು ಈ ಮಸೂದೆಯನ್ನು ಮೊದಲೇ ತಂದಿದ್ದರೆ, ನಾನು ಅದನ್ನು ನಿಲ್ಲಿಸುತ್ತಿದ್ದೆ… ” ಎಂದು ಲೋಕಸಭಾ ಸಂಸದರು ಹೇಳಿದರು.