ಹೈದರಾಬಾದ್: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸಿಎಂ ಕೆಸಿಆರ್ ಪುತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ಎಂಎಲ್ಸಿ ಕೆ ಕವಿತಾ ಅವರನ್ನು ಕೇಂದ್ರ ತನಿಖಾ ದಳ(CBI)ಇಂದು ವಿಚಾರಣೆ ನಡೆಸಲಿದೆ.
ಈ ಹಿನ್ನೆಲೆಯಲ್ಲಿ ಕವಿತಾ ಅವರ ನಿವಾಸದ ಬಳಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕವಿತಾ ನಿವಾಸದ ಬಳಿ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿದ್ದು, ಆಕೆಯ ಮನೆಯ ಸಮೀಪಕ್ಕೆ ಯಾರೂ ತೆರಳಲು ಅವಕಾಶವಿಲ್ಲ.
ಟಿಆರ್ಎಸ್ ಮೂಲಗಳ ಪ್ರಕಾರ, ನಿವಾಸದಲ್ಲಿ ಅನಗತ್ಯವಾಗಿ ಸೇರದಂತೆ ಪಕ್ಷದ ಕಾರ್ಯಕರ್ತರಿಗೆ ಟಿಆರ್ಎಸ್ ಉನ್ನತ ನಾಯಕತ್ವ ಸೂಚನೆ ನೀಡಿದೆ. ಏಜೆನ್ಸಿಯೊಂದಿಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಮೂಲಗಳು ತಿಳಿಸಿವೆ. ಹೈದರಾಬಾದ್ನ ಬಂಜಾರಾ ಹಿಲ್ಸ್ನಲ್ಲಿರುವ ಕವಿತಾ ಅವರ ನಿವಾಸದಲ್ಲಿ ವಿಚಾರಣೆ ನಡೆಯಲಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 6 ರಂದು ವಿಚಾರಣೆಗೆ ಒಳಗಾಗಬೇಕಿದ್ದ ಕವಿತಾ ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕಾದ್ದರಿಂದ ಕಾಲಾವಕಾಶ ಕೋರಿ ಸಿಬಿಐಗೆ ಪತ್ರ ಬರೆದಿದ್ದರು. ಅದರಲ್ಲಿ ಡಿಸೆಂಬರ್ 11 ಮತ್ತು 15 ರ ನಡುವೆ ಯಾವುದೇ ಸಮಯದಲ್ಲಿ (13 ಹೊರತುಪಡಿಸಿ) ತಮ್ಮ ನಿವಾಸಕ್ಕೆ ವಿಚಾರಣೆಗೆ ಬನ್ನಿ ಎಂದು ಪತ್ರದಲ್ಲಿ ಬರೆದಿದ್ರು. ಅದರಂತೇ ಇಂದು (ಡಿಸೆಂಬರ್ 11 ) ಸಿಬಿಐ ಇಂದು ವಿಚಾರಣೆ ನಡೆಸಲಿದೆ.
liver damage: ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಇದು ನಿಮ್ಮ ʻಯಕೃತ್ತಿನ ಹಾನಿʼಯ ಅಪಾಯವಾಗಿರಬಹುದು
BIGG NEWS: ಕೊಪ್ಪಳದಲ್ಲಿ ಬಲವಂತದ ಮತಾಂತರ ಪ್ರಕರಣ; ಮೂವರ ವಿರುದ್ಧ ದೂರು ದಾಖಲು
liver damage: ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಇದು ನಿಮ್ಮ ʻಯಕೃತ್ತಿನ ಹಾನಿʼಯ ಅಪಾಯವಾಗಿರಬಹುದು
BIGG NEWS: ಕೊಪ್ಪಳದಲ್ಲಿ ಬಲವಂತದ ಮತಾಂತರ ಪ್ರಕರಣ; ಮೂವರ ವಿರುದ್ಧ ದೂರು ದಾಖಲು