ನವದೆಹಲಿ: ಸಲಾಂ ಆರತಿ ಹೆಸರು ಬದಲಿಸುವ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ ನಿರ್ಧಾರ ತೆಗೆದುಕೊಂಡಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಮೋದಿಯ ʻಮನ್ ಕಿ ಬಾತ್ʼ ಕಾರ್ಯಕ್ರಮದ ಪುಸ್ತಕ ಪ್ರಕಟಿಸುವುದಾಗಿ ಹಣ ವಸೂಲಿ, ಸಂಪಾದಕನ ವಿರುದ್ಧ ಕೇಸ್ ದಾಖಲು
ನಗರದಲ್ಲಿ ಮಾತನಾಡಿದ ಅವರು, ಸಲಾಂ ಆರತಿ ಹೆಸರು ಬದಲಿಸುವಂತೆ ಸಾಕಷ್ಟು ಮನವಿಗಳು ಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಧಾರ್ಮಿಕ ಧಾರ್ಮಿಕ ಪರಿಷತ್ ಸಭೆಯಲ್ಲಿ ಚರ್ಚೆ ಮಾಡಿ ಹೆಸರು ಬದಲಿಸುವ ನಿರ್ಧಾರ ತೆಗೆದುಕೊಂಡಿದೆ. ಈ ಮನವಿ ಈಗ ಇಲಾಖೆಗೆ ಬಂದಿದ್ದು, ಮುಂದಿನ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು.
ಮುಜರಾಯಿ ಇಲಾಖೆ ಹೆಸರು ಬದಲಿಸುವ ಪ್ರಸ್ತಾಪವೂ ಇದೆ. ಯಾವುದೇ ಹೆಸರನ್ನು ಏಕಾಏಕಿ ಬದಲಿಸಲು ಸಾಧ್ಯವಿಲ್ಲ. ಈ ಬಗ್ಗೆ ತಜ್ಞರು, ಇತಿಹಾಸಕಾರರು, ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಬೇಕು ಅವರ ಅಭಿಪ್ರಾಯ ಪಡೆದು ಬಳಿಕ ಸಿಎಂ ಜೊತೆಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.