ಚಾಮರಾಜನಗರ: ಡಿ.12ರಂದು ಚಾಮರಾಜನಗರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಹನೂರು ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, ಅಲ್ಲಿ 650 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
BIGG NEWS: ಚಿತ್ರದುರ್ಗ ಪೊಲೀಸರ ಮೇಲೆ ದೂರು ನೀಡಿದ್ದ ಮೈಸೂರಿನ ಒಡನಾಡಿ ಸಂಸ್ಥೆಗೆ ನೋಟಿಸ್
ನಂತರ ಮಾತನಾಡಿದ ಅವರು, ನಾನು ಚಾಮರಾಜನಗರಕ್ಕೆ ಭೇಟಿ ನೀಡುತ್ತೇನೆ. ಕೆಲವರು ಅಲ್ಲಿಗೆ ಹೋಗಬಾರದು ಇಲ್ಲಿಗೆ ಹೋಗಬಾರದು ಅಂತ ಏನೇನೋ ಹೇಳುತ್ತಾರೆ. ನಾವು ಸಿನಿಮಾ ನೋಡಬೇಕು ಅನಿಸಿದಾಗ ಥಿಯೇಟರ್ಗೆ ಹೋಗುತ್ತೇವೆ. ಥಿಯೇಟರ್ ಹೇಗಿರುತ್ತೆ ಅಂತ ನೋಡಲ್ಲ. ಏಕೆಂದರೆ ಯಾವುದೇ ಜಾಗದಲ್ಲಿ ದೋಷ ಇರುವುದಿಲ್ಲ. ಬದಲಿಗೆ ನಾವು ನೋಡುವ ದೃಷ್ಟಿಕೋನದಲ್ಲಿಯೇ ದೋಷ ಇರುತ್ತದೆ. ಅಭಿವೃದ್ಧಿ ದೃಷ್ಟಿಯಿಂದ ಯಾವಾಗ ಬೇಕಾದರೂ ಚಾಮರಾಜನಗರಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ.