ಬೆಂಗಳೂರು : ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಟಿಪ್ಪು ಸುಲ್ತಾನ್ ಕಾಲದ ಸಲಾಂ ಮಂಗಳಾರತಿ ಸ್ಥಗಿತ ಮಾಡಿರುವ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
BREAKING NEWS : ಸರ್ವಪಕ್ಷ ಸಭೆ ಬಗ್ಗೆ ಇಂದು ಸಿದ್ದರಾಮಯ್ಯ, ಹೆಚ್ ಡಿಕೆ ಜೊತೆಗೆ ಚರ್ಚೆ : ಸಿಎಂ ಬೊಮ್ಮಾಯಿ
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಟಿಪ್ಪು ಸುಲ್ತಾನ್ ಕಾಲದ ಸಲಾಂ ದೀವಾಟಿಗೆ ಮಂಗಳಾರತಿ ಸ್ಥಗಿತದ ವಿಚಾರದ ಬಗ್ಗೆ ಯಾವುದೇ ಚರ್ಚೆ, ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ.
ಪುತ್ತೂರು, ಸುಬ್ರಹ್ಮಣ್ಯ, ಕೊಲ್ಲೂರು ಸಹಿತ ವಿವಿಧ ದೇವಸ್ಥಾನಗಳಲ್ಲಿ ಸಲಾಂ ಮಂಗಳಾರತಿ ಎಂಬ ಹೆಸರಿನಲ್ಲಿ ಸೇವೆಗಳು ನಡೆಯುತ್ತಿದ್ದು, ಅದರ ಹೆಸರು ಬದಲಾಯಿಸಲು ರಾಜ್ಯ ಧಾರ್ಮಿಕ ಪರಿಷತ್ ತೀರ್ಮಾನಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಟಿಪ್ಪು ಸುಲ್ತಾನ್ ಕಾಲದ ಸಲಾಂ ದೀವಾಟಿಗೆ ಮಂಗಳಾರತಿ ಸ್ಥಗಿತದ ವಿಚಾರದ ಬಗ್ಗೆ ಯಾವುದೇ ಚರ್ಚೆ, ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ.
ಇನ್ನು ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಸೋಮವಾರ ಕರ್ನಾಟಕದ ಸಂಸದರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ತಿಳಿಸಿದ್ದೇನೆ. ನಾನೂ ಕೂಡ ರಾಜ್ಯದ ನ್ಯಾಯ ಸಮ್ಮತ ನಿಲುವನ್ನು ತಿಳಿಸಲು ಕೇಂದ್ರ ಗೃಹ ಸಚಿವರನ್ನು ಶೀಘ್ರವೇ ಭೇಟಿ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.
BREAKING NEWS : ಸರ್ವಪಕ್ಷ ಸಭೆ ಬಗ್ಗೆ ಇಂದು ಸಿದ್ದರಾಮಯ್ಯ, ಹೆಚ್ ಡಿಕೆ ಜೊತೆಗೆ ಚರ್ಚೆ : ಸಿಎಂ ಬೊಮ್ಮಾಯಿ