ಹೈದ್ರಬಾದ್: ರಾಚಕೊಂಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಆದಿಬಟ್ಲಾದಲ್ಲಿ 100 ಜನರ ಗುಂಪು ಮನೆಯೊಂದಕ್ಕೆ ನುಗ್ಗಿ ‘ಡೆಂಟಲ್ ವೈದ್ಯೆ’ ಕಿಡ್ಯಾಪ್ ಮಾಡಿರುವ ಘಟನೆ ನಡೆದಿದೆ. ಸುಮಾರು 100 ಯುವಕರು ತಮ್ಮ ಮನೆಗೆ ನುಗ್ಗಿ ತಮ್ಮ ಮಗಳು ವಯಾಶಾಲಿಯನ್ನು ಬಲವಂತವಾಗಿ ಕರೆದೊಯ್ದರು ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ. ತಮ್ಮ ಮಗಳನ್ನು ರಕ್ಷಿಸಲು ಬಂದಿದ್ದ ತಮ್ಮ ನೆರೆಹೊರೆಯವರು ಮತ್ತು ಸಂಬಂಧಿಕರ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆಕೆಯ ಪೋಷಕರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಇಬ್ರಾಹಿಂಪಟ್ಟಣಂ ಎಸಿಪಿ ಉಮಾಮಹೇಶ್ವರ್ ತಮ್ಮ ತಂಡದೊಂದಿಗೆ ಸ್ಥಳಕ್ಕೆ ತಲುಪಿದರು. ಪ್ರಕರಣ ದಾಖಲಾಗಿದ್ದು, ಅಪಹರಣಕಾರರನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ತಮ್ಮ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಅಪಹರಣಕಾರನನ್ನು ಮಿಸ್ಟರ್ ಟೀ ಸಂಸ್ಥಾಪಕ ನವೀನ್ ರೆಡ್ಡಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
At least 50 unidentified persons allegedly #kidnapped a young doctor, hours before her engagement, at Turkayamjal in #Adibatla , outskirts of #Hyderabad, most of them armed with sticks, iron rods, entered the house and forcibly took away the woman. pic.twitter.com/BqsG3XQymc
— AZ-NEWS AGENCY (@JafferyAzmath) December 9, 2022