ಬಳ್ಳಾರಿ : ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ರಾಜ್ಯ ರಾಜಕಾರಣಕ್ಕೆ ಮರುಪ್ರವೇಶದ ನಿರ್ಧಾರಕ್ಕೆ ಬಂದಿದ್ದು, ಕರ್ನಾಟಕದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
BIGG NEWS : ರಾಜ್ಯದ ಬೆಟ್ಟ ಕುರುಬರಿಗೆ `ST’ ಸ್ಥಾನ : ಲೋಕಸಭೆಯಲ್ಲಿ ಮಸೂದೆ ಮಂಡನೆ
ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ತಮ್ಮ ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭಿಸಲು ಜನಾರ್ಧನ ರೆಡ್ಡಿಯವರು ನಿರ್ಧರಿಸಿದ್ದಾರೆ. ಆದರೆ ಬಿಜೆಪಿ ಸೇರುವ ಬಗ್ಗೆ ಡಿಸೆಂಬರ್ 18 ರವರೆಗೆ ಪರೋಕ್ಷವಾಗಿ ಹೈಕಮಾಂಡ್ ಗೆ ಗಡುವು ನೀಡಿದ್ದು, ಒಂದು ವೇಳೆ ಬಿಜೆಪಿ ಅವಕಾಶ ನೀಡದಿದ್ದರೆ ವೈಎಸ್ ಆರ್ ಕಾಂಗ್ರೆಸ್ ಪಕ್ಷಿದಂದ ಜನಾರ್ದನ ರೆಡ್ಡಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.
BIGG NEWS : ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ರಣತಂತ್ರ : ಇಂದು ಕಲಬುರಗಿ ʼಕಾಂಗ್ರೆಸ್ ಕಲ್ಯಾಣ ಕ್ರಾಂತಿ ಸಮಾವೇಶʼ
ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಸೇರುವ ಕುರಿತಂತೆ ಈಗಾಗಲೇ ಜನಾರ್ಧನರೆಡ್ಡಿ ಅವರು ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿಯವರ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಡಿಸೆಂಬರ್ 18 ರಂದು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜಕೀಯ ಪ್ರವೇಶಿಸಲು ನಿರ್ಧರಿಸಿರುವ ಜನಾರ್ಧನ ರೆಡ್ಡಿಯವರು ತಮ್ಮ ಉದ್ದೇಶದಂತೆ ನಡೆಯಲು ಗಂಗಾವತಿಯ ಕನಕಗಿರಿ ರಸ್ತೆಯಲ್ಲಿರುವ ವಡ್ಡರಟ್ಟಿಯಲ್ಲಿ ಮನೆಯೊಂದನ್ನು ಖರೀದಿ ಮಾಡಿದ್ದಾರೆ. ಅಲ್ಲಿಂದಲೇ ತಮ್ಮ ರಾಜಕೀಯ ಜೀವನವನ್ನು ಪುನರಾರಂಭಿಸಲು ಮುಂದಾಗಿದ್ದಾರೆ.